ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಮಾಜಿಕ ಸ್ವಾಸ್ಥ್ಯಕ್ಕೆ ಶ್ರಮಿಸುತ್ತಿರುವ ವಿಪ್ರರು: ರವಿಕುಮಾರ್

Rashmi Kasaragodu
Updated On : 11 Aug 2013, 12:21 pm

ಗೌರಿಬಿದನೂರು:  ವಿಪ್ರ ಸಮುದಾಯ ಬೇರೆ ಎಲ್ಲ ಸಮುದಾಯಗಳೊಂದಿಗೆ ಬೆರೆತು ಯಾರೊಂದಿಗೂ ವೈರತ್ವ ಬೆಳಸದೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಶ್ರಮಿಸುತ್ತದೆ ಎಂದು ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ್ ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ವಿಪ್ರ ಸಮುದಾಯದ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ವಿಪ್ರ ಜನಾಂಗ ದೇಶಾದ್ಯಂತ ಕಡಿಮೆ ಸಂಖ್ಯೆಯಿದ್ದರೂ ಸಹ ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ಜನಾಂಗಕ್ಕೆ ಹಾಗೂ ಧರ್ಮಕ್ಕೆ ಧಕ್ಕೆ ಬಾರದ ರೀತಿ ಕೆಡುಕು ಬಯಸದೇ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಬ್ರಾಹ್ಮಣ ನೌಕರರ ಸೇವಾ ಸಂಘದ ಅಧ್ಯಕ್ಷ ಆದಿಶೇಷರಾವ್ ಮಾತನಾಡಿ, ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಲವಾರು ಸಮುದಾಯಗಳೊಡನೆ ವಿಪ್ರ ನೌಕರರು ಸ್ಪರ್ಧಿಸಿ ಚುನಾಯಿತರಾಗಿದ್ದಾರೆ.  ಕೆಲವರು ಅವಿರೋಧ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಜನಾಂಗಕ್ಕೆ ಇದು ಮಾದರಿ ಎಂದರು.
ಸ್ವಪ್ರಯತ್ನದಿಂದ ಹೋರಾಟ ನಡೆಸುತ್ತಾ ಯಾವುದೇ ಮೀಸಲಾತಿ ಬಯಸದೇ ಪಾಲಿಗೆ ಬಂದಿದ್ದನ್ನು ಅನುಭವಿಸುತ್ತಾ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.
ಅಭಿನಂದನೆ ಸ್ವೀಕರಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎನ್.ವಿ. ರಾವ್ ಮಾತನಾಡಿ, ಯಾವುದೇ ಕೆಲಸ ನಿಸ್ವಾರ್ಥವಾಗಿ ಪ್ರಾಮಾಣಿಕತೆಯಿಂದ ಮಾಡಿದ್ದಲ್ಲಿ ಅದು ಎಂದೆಂದೂ ನಮ್ಮನ್ನು ಕಾಯುತ್ತದೆ. ಎಲ್ಲ ಜನಾಂಗಗಳ ವಿಶ್ವಾಸ ಪಡೆದು ಹಾಗೂ ವಿವಿಧ ಇಲಾಖೆಗಳ ನೌಕರರು ವಿಶ್ವಾಸವಿಟ್ಟು ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ನೌಕರರ ಹಿತ ಕಾಪಾಡುವುದಾಗಿ ಮತ್ತು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಂಘವು ಸಮಾಜ ಮುಖಿಯಾಗಿರುವುದಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ತಾಲೂಕು ಘಟಕದ ಚುನಾವಣೆಯಲ್ಲಿ ಆಯ್ಕೆಯಾದ ಪ್ರೌಢಶಾಲಾ ಶಿಕ್ಷಕ ವೈ.ನಾಗರಾಜರಾವ್, ಖಜಾನೆ ಇಲಾಖೆಯ ಶ್ರೀಧರ್, ಎಪಿಎಂಸಿಯ ರವೀಂದ್ರ ಹಾಗೂ ಸಿಡಿಪಿಒ ಇಲಾಖೆಮೂಕಾಂಬಿಕಾ ಅವರನ್ನು ಸನ್ಮಾನಿಸಲಾಯಿತು.
ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಲಕ್ಷ್ಮೀನಾರಾಯಣ್, ಜಿಲ್ಲಾ ಕಸಾಪ ಅಧ್ಯಕ್ಷ ಹನುಮಂತರಾವ್ ಇದ್ದರು. ಹರೀಶ್ ಹತ್ವಾರ್, ಸತ್ಯನ್, ಸುಬ್ರಮಣ್ಯಂ, ಪವನಕುಮಾರ್, ಸಿಂಹಾದ್ರಿ, ಭಾರತಿ ರಮೇಶ್, ಉಪೇಂದ್ರ ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement