ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆ
ಕೋಲಾರ: ನಗರದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತಾಧಿಗಳು ಶ್ರದ್ಧೆಯಿಂದ ಆಚರಿಸಿದರು. ವಿವಿಧ ದೇವಾಲಯಗಳ ಆವರಣದಲ್ಲಿನ ನಾಗರಕಟ್ಟೆಗಳಲ್ಲಿ ಪೂಜೆ ನೆರವೇರಿತು, ನಾಗರಕಲ್ಲುಗಳಿಗೆ ಭಕ್ತರು ಹಾಲು ಎರೆದು ಆರಿಕೆ ತೀರಿಸಿದರು. ನಾಗರ ಪಂಚಮಿಯು ಒಡ ಹುಟ್ಟಿದವರ ಹಬ್ಬವೆಂದು ಪ್ರಸಿದ್ಧಿ ಪಡೆದಿದ್ದು ಅಣ್ಣ ಮತ್ತು ತಮ್ಮಂದಿರಿಗೆ ಸಹೋದರಿ, ಸಹೋದರಿಯರು ಬೆನ್ನಿಗೆ ಹಾಲಿನಲ್ಲಿ ಪ್ರೋಕ್ಷಣೆ ಮಾಡಿ ಬಾಂಧವ್ಯ ಚಿರಾಯುವಾಗಲಿ ಎಂದು ಆಶಿಸಿದರು. ಶನಿವಾರ ನಾಗರಚೌತಿಯನ್ನು ಆಚರಿಸಿದ್ದ ಅನೇಕರು ಇಂದು ಪಂಚಮಿ ಹಬ್ಬವನ್ನು ಮನೆಗಳಲ್ಲಿ ಆಚರಿಸಿ ಸಂಭ್ರಮಿಸಿದರು