ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಾಜಕ್ಕೆ ಪ್ರೇರಣೆ ನೀಡುವ ಕಾರ್ಯ ಅವಶ್ಯ

Rashmi Kasaragodu
Updated On : 12 Aug 2013, 12:37 pm

ಮಾಲೂರು: ಧಾರ್ಮಿಕ ಕಾರ್ಯಗಳಲ್ಲಿ ಸಿಗುವ ಮನಶಾಂತಿ ಬೇರೆಲ್ಲ ಸಿಗಲು ಸಾಧ್ಯವಿಲ್ಲ. ದಿನಕ್ಕೆ ಅರ್ಧ ಗಂಟೆಯಾದರೂ ದೇವರ ಕಾರ್ಯಗಳಿಗೆ ಮೀಸಲಿಡಿ ಎಂದು ಪುರಸಭೆ ಸದಸ್ಯ ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಲಿಂಗೇಶ್ವರಯ್ಯ ಹೇಳಿದರು.
ಇಲ್ಲಿನ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶಿವಶರಣೆ ಅಕ್ಕಮಹಾದೇವಿ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನ ಜಂಜಾಟದಲ್ಲಿ ಮನಶಾಂತಿ ಕೊರತೆ ಕಾಡುತ್ತದೆ. ಆದರೆ, ಜರ್ನಾದನ ಸೇವೆ, ಪರಮಾತ್ಮನ ಸೇವೆಯಲ್ಲಿ ಸಿಗುವ ಶಾಂತಿ ನಿಮ್ಮಿಗೆ ಬೇರಲ್ಲೂ ಸಿಗಲು ಸಾಧ್ಯವಿಲ್ಲ. ತಪ್ಪು ಯೋಚನೆಗಳಿಗೆ ಅವಕಾಶ ಮಾಡಿಕೊಡದೆ ಸಮಾಜಕ್ಕೆ ಉತ್ತಮ ಕಾರ್ಯ ಮಾಡಲು ಪ್ರೇರೆಪಣೆ ನೀಡುವ ದೇವತಾ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಅ.ಭಾ. ವೀರಶೈವ ಮಹಾಸಭಾದ ಉಪಾಧ್ಯಕ್ಷ ಟಿ.ಸಿ.ನಾಗರಾಜ್ ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಜ್ಞಾನಮೂರ್ತಿ ವಚನ ಗಾಯನ ನಡೆಸಿಕೊಟ್ಟರು. ತಾಲೂಕು ವೀರಶೈವ ನೌಕರರ ಸಂಘದ ಅಧ್ಯಕ್ಷ ಷಮ್ಮುಖಯ್ಯ,ಅಕ್ಕನ ಬಳಗದ ಅಧ್ಯಕ್ಷೆ ವನಜಮ್ಮ, ಉಪಾಧ್ಯಕ್ಷೆ ಶಿವಪ್ಪ, ಯುವಕ ಮಂಡಳಿ ಅಧ್ಯಕ್ಷ, ಯೋಗೇಶ್, ಸಿ.ಶಶಿಧರ್, ಅಪರ್ಣ, ಚಂದ್ರಶೇಖರ್, ಶಿವಕುಮಾರ್, ರಂಜನ್, ಭದ್ರಪ್ಪ, ಮಂಜು, ಉದಯ್,ಪಾಂಡುರಂಗ, ಸೋಮಶೇಖರ್, ಬಸವರಾಜಮ್ಮ, ಉಮಾದೇವಿ, ವಾಲಿ, ಮಂಜುಳಮ್ಮ ಇದ್ದರು.
ವಿಜೃಂಭಣೆ ಪ್ರತಿಷ್ಠಾಪನೆ:  ದೊಡ್ಡಪೇಟೆಯ ಬಸವೇಶ್ವರ ದೇವಾಲಯದಲ್ಲಿ ಶಿವಶರಣೆ ಅಕ್ಕಮಹಾದೇವಿಯ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯ ಶನಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ವಿಜೃಂಭಣೆಯಿಂದ ನಡೆಯಿತು.
 ಮಂಗಳ ವಾದ್ಯದೊಂದಿಗೆ ಸುಮಂಗಲಿಯರಿಂದ ಗಂಗೆ ಪೂಜೆ, ಗಣಪತಿ ಹೋಮ, ಸರ್ವದೇವತಾ ಹೋಮ, ನಾಂದಿ, ರಕ್ಷಾ ಬಂಧನ್, ಕಳಶ ಸ್ಥಾಪನೆ, ನವಗ್ರಹ ಪೂಜಾದಿಗಳು, ಅಗ್ನಿ ಪ್ರತಿಷ್ಠೆ ನಡೆಯಿತು.
ರಾಜಣ್ಣ ಶಾಸ್ತ್ರಿ, ಬಸಪ್ಪ ಶಾಸ್ತ್ರಿ ಹಾಗೂ ಗಂಗಾಧರ್ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗದಳು ನಡೆದವು. ತಾಲೂಕಿನ ವೀರಶೈವ ಸಮಾಜದ ಬಹುತೇಕ ಕುಟುಂಬಗಳು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement