ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೌರಕಾರ್ಮಿಕರಿಂದ ನಗರಾಭಿವೃದ್ಧಿ ಕೋಶದ ಅಧಿಕಾರಿಗೆ ಘೇರಾವ್

Rashmi Kasaragodu
Updated On : 13 Aug 2013, 12:28 pm

ಕೋಲಾರ: ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಪಟ್ಟಿ ಸರ್ಕಾರಕ್ಕೆ ಕಳುಹಿಸಲು ನಗರಾಭಿವೃದ್ಧಿ ಕೋಶದ ಅಧಿಕಾರಿ ಬೇಕಾಗಿಯೇ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಸೋಮವಾರ ಪೌರಕಾರ್ಮಿಕರು ಕೋಲಾರದಲ್ಲಿ ಪಿಡಿ ಕಚೇರಿಯಲ್ಲಿ ಅಧಿಕಾರಿಗೆ ಮುತ್ತಿಗೆ ಹಾಕಿದರು.
ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2006ರ ಏಪ್ರಿಲ್ 10ರಿಂದ ದಿನಗೂಲಿ ನೌಕರರಾಗಿ 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ದಿನಗೂಲಿ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ಸರ್ಕಾರಕ್ಕೆ ಪಟ್ಟಿ ಸಲ್ಲಿಸಬೇಕಾಗಿತ್ತು.
ಆದರೆ ಅಧಿಕಾರಿಯು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆಂದು ಆರೋಪಿಸಿದರು. ಜಿಲ್ಲೆಯಲ್ಲಿ ಕೋಲಾರ ನಗರಸಭೆಯಲ್ಲಿ 79, ಕೆಜಿಎಫ್- 1, ಬಂಗಾರಪೇಟೆ-6, ಮುಳಬಾಗಲು-54,  ಶ್ರೀನಿವಾಸಪುರ-7 ಹಾಗೂ ಮಾಲೂರು 29 ಮಂದಿ ಸೇರಿದಂತೆ ಒಟ್ಟು 176 ಪೌರ ಕಾರ್ಮಿಕರು ಕಳೆದ 10 ವರ್ಷಕ್ಕಿಂತ ಮೇಲ್ಪಟ್ಟು   ದಿನಗೂಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದು ಪಿಡಿಯವರು ಸರ್ಕಾರಕ್ಕೆ ವರದಿ ನೀಡದಿರುವುದರಿಂದ ನಮಗೆ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.
ಪಿ.ಡಿ.ಯವರಾದ  ಸರ್ವರ್ ಮರ್ಚೆಂಟ್ ಅವರನ್ನು ತರಾಟೆಗೆ ತೆಗೆದುಕೊಂಡ ಪೌರ ಕಾರ್ಮಿಕರು ಪಟ್ಟಿ ಕಳುಹಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪರಿಸ್ಥಿತಿ ಅರಿತ ಪಿಡಿ ಪೌರ ಕಾರ್ಮಿಕರ  ಪಟ್ಟಿ ಸಿದ್ಧಪಡಿಸಿ ತಕ್ಷಣ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ  ನೀಡಿದರು.  
ಪೌರಕಾರ್ಮಿಕರ  ಮುಖಂಡರಾದ  ವೆಂಕಟೇಶ್, ಮಂಜುನಾಥ್, ನಾರಾಯಣಸ್ವಾಮಿ, ಅಶ್ವತ್ಥಪ್ಪ, ವೆಂಕಟರಮಣ, ವೆಂಕಟಾಚಲಪತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement