ಮಾಲೂರಲ್ಲಿ ಸಿಎಂ ಹುಟ್ಟುಹಬ್ಬ
ಕ.ಪ್ರ.ವಾರ್ತೆ ಮಾಲೂರು ಆ.12
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 66 ನೇ ಜನ್ಮ ದಿನಾಚರಣೆ ಅಂಗವಾಗಿ ಸ್ಥಳೀಯ ಕಾಂಗ್ರೆಸ್ ಘಟಕ ಸೋಮವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ಹಿಂದುಳಿದ ವರ್ಗಗಳ ಆಶಾ ಕಿರಣವಾಗಿರುವ ಸಿದ್ಧರಾಮಯ್ಯ ರವರ ಆಡಳಿತದಲ್ಲಿ ರಾಜ್ಯದಲ್ಲಿ ಸಮಾನತೆಗೆ ಅರ್ಥ ಸಿಗಲಿದೆ. ಅಂತಹ ಧೀಮಂತ ನಾಯಕ ರವರಿಗೆ ಆರೋಗ್ಯ- ಆಯುಷ್ಯ ನೀಡಲಿ ಎಂದರು.ರಾಜಗೋಪಾಲ್ ರೆಡ್ಡಿ, ಲಕ್ಷ್ಮಿನಾರಾಯಣ್, ಸಿ.ಪಿ. ವೆಂಕಟೇಶ್, ಚಂದ್ರಶೇಖರ್, ಪಾಪರೆಡ್ಡಿ ಸೇರಿದಂತೆ ಹಲಾವರು ಮುಖಂಡರು ಇದ್ದರು.