ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೂಕ್ತ ಬಸ್ ಸಂಚಾರ ವ್ಯವಸ್ಥೆಗೆ ಒತ್ತಾಯ

Rashmi Kasaragodu
Updated On : 13 Aug 2013, 12:41 pm

ಚಿಂತಾಮಣಿ: ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಮಾರ್ಗದ ಸಂಖ್ಯೆ 52ರ ಬಸ್ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಆದರೆ, ಇದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು, ವರ್ತಕರಿಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ ಎಂದು ಮೈಲಾಂಡ್ಲಹಳ್ಳಿ ಕನ್ನಡ ಸೇನೆ ಮತ್ತು ಚಿಂತಾಮಣಿಯ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಘಟಕದಿಂದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಶಾಂತಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಚಿಂತಾಮಣಿಯಿಂದ ಕುರುಬೂರು ಗ್ರಾಮಕ್ಕೆ ಬೆಳಿಗ್ಗೆ 8 ಗಂಟೆಗೆ ಕಾಚಹಳ್ಳಿ, ಗಡದಾಸನಹಳ್ಳಿ, ಯಡಹಳ್ಳಿ, ಕೂತರಾಜನಹಳ್ಳಿ, ಗಾಜಲಹಳ್ಳಿ ಮಾರ್ಗವಾಗಿ ಬಂದು ಮತ್ತೆ ಕುರುಬೂರಿನಿಂದ ಚಿಂತಾಮಣಿ ಮಾರ್ಗವಾಗಿ ಸಂಚರಿಸುತ್ತಿದೆ. ಈ ಮಾರ್ಗದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಇತರರಿಗೆ ಅನುಕೂಲವಾಗುತ್ತಿತ್ತು. ಆದರೆ, ಈ ಬಸ್ ಮಾರ್ಗ ಅನವಶ್ಯಕವಾಗಿ ಬದಲಾಯಿಸಿರುವುದರಿಂದ ಎಲ್ಲರಿಗೂ ತೀವ್ರ ತೊಂದರೆಯಾಗುತ್ತಿದೆ ಎಂದರು. ಮನವಿಗೆ ಸ್ಪಂದಿಸಿದ ವ್ಯವಸ್ಥಾಪಕರರು, ಈ ಸಂಬಂಧದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸದರಿ ಮಾರ್ಗಗಳಲ್ಲಿಯೇ ಬಸ್ ಸಂಚರಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಉಭಯ ವೇದಿಕೆಗಳ ಪದಾಧಿಕಾರಿಗಳಾದ ಎಂ.ಡಿ. ಖಾಜಾ ಹುಸೇನ್, ಇಮ್ರಾನ್ ಪಾಷಾ,ನದೀಮ ನಯಾಜ್, ಷಫಿಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement