ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷೆ
ಮಾಲೂರು: ಮಾಲೂರು ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಬಂಧ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ತಲಾ ಇಬ್ಬರು ನಾಮಪತ್ರ ಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಲ್ಲಿ ಆಶಾ ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಲ್ಲಿ ರಾಧಮ್ಮ ವಾಪಸ್ ಪಡೆದ ಕಾರಣ ಕಣದಲ್ಲಿ ಉಳಿದಿದ್ದ ಅಧ್ಯಕ್ಷ ಸ್ಥಾನದ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನದ ರಾಜೇನಹಳ್ಳಿ ರಾಜಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಆಯೀಷಾ ಪರ್ವೆಜ್ ತಿಳಿಸಿದರು. 18 ಸದಸ್ಯರ ಬಲವುಳ್ಳ ಮಾಲೂರು ತಾಲೂಕು ಪಂಚಾಯಿತಿಯಲ್ಲಿ 15 ಸದಸ್ಯರು ಬಿಜೆಪಿ ಪಕ್ಷದ ಚೆಹ್ನೆಯಲ್ಲಿ ಗೆದ್ದವರಾಗಿದ್ದು, ಗೆದ್ದ ಅಭ್ಯರ್ಥಿಗಳನ್ನು ಬಿಜೆಪಿ ತಾಲೂಕು ಅಧ್ಯಕ್ಷ ವೆಂಕಟೇಶ್, ಜಿಲ್ಲಾಧ್ಯಕ್ಷ ಕೃಷಾರೆಡ್ಡಿ, ಜಿ.ಪಂ. ಸದಸ್ಯ ರಾಮಸ್ವಾಮಿ ರೆಡ್ಡಿ ಅಭಿನಂದಿಸಿದ್ದಾರೆ.