ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಗುಲದಲ್ಲಿ ಚಿನ್ನಾಭರಣ, ನಗದು ಕಳವು

Rashmi Kasaragodu
Updated On : 14 Aug 2013, 12:38 pm

ಬಂಗಾರಪೇಟೆ: ದೇವಾಲಯದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಚಿನ್ನದ ಆಭರಣಗಳು, ನಗದು ಸೇರಿದಂತೆ ಒಟ್ಟು 60 ಸಾವಿರ ರು. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಪಟ್ಟಣದ ರೇಲ್ವೆ ಕ್ವಾಟ್ರಸ್ ಬಳಿಯಿರುವ ಮುತ್ತುಮಾರಿಯಮ್ಮನ್ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸೋಮವಾರ ರಾತ್ರಿ ದೇವಾಲಯದ ಬಾಗಿಲು ಮುರಿದು ದೇವರ ಮೈ ಮೇಲಿದ್ದ ಚಿನ್ನದ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ಸುಮಾರು 30 ಸಾವಿರ ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದರೂ ಯಾವುದೇ ಸುಳಿವು ದೊರೆಯಲಿಲ್ಲ.
ಕಳೆದ ಕಲ ತಿಂಗಳಿಂದ ಮಾಯವಾಗಿದ್ದ ಕಳ್ಳತನ ಪ್ರಕರಣಗಳು ಈಗ ಮತ್ತೆ ಆರಂಭವಾಗಿವೆ. 12 ದಿನಗಳಿಂದ ರಾತ್ರಿ ವೇಳೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕಳ್ಳರಿಗೆ ವರದಾನವಾಗಿದೆ. ರಾತ್ರಿ ವೇಳೆಯಾದರೂ ವಿದ್ಯುತ್ ಕಡಿತ ನಿಲ್ಲಿಸಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement