ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾವಯವ ಕೃಷಿಗೆ ಆದ್ಯತೆ ನೀಡಿ: ಸಾಲೋಮನ್

Rashmi Kasaragodu
Updated On : 14 Aug 2013, 12:35 pm

ಗುಡಿಬಂಡೆ: ಪ್ರಾಚೀನ ಕಾಲದಿಂದ ಬಳಸುತ್ತಿದ್ದ ಸಾವಯವ ಕೃಷಿಯನ್ನು ಎಲ್ಲ ರೈತರು ಅಳವಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂದು ಡಿಪಿಜಿ ಸಂಸೆ ಕಾರ್ಯನಿರ್ವಹಣಾಧಿಕಾರಿ ಭಕ್ತರ್ ಸಾಲೋಮನ್ ಹೇಳಿದರು.
ತಾಲೂಕಿನ ಮೇಡಿಮಾಕಲಹಳ್ಳಿ ಗ್ರಾಮದಲ್ಲಿ ಚೆನ್ನೈನ ಡೆವೆಲಪ್ಮೆಂಟ್ ಪ್ರಮೋಷನ್ ಗ್ರೂಪ್ ಹಾಗೂ ಸ್ಥಳೀಯ ವಾಹಿನಿ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ತರಬೇತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದರಿಂದ ದಿನೇದಿನೇ ಭೂಮಿ ಫಲವತ್ತತೆ ಕಡಿಮೆಯಾಗಿ ಕೊನೆಗೊಂದು ದಿನ ಭೂಮಿ ಬಂಜರಾಗುತ್ತದೆ. ಆದ್ದರಿಂದ ಸಾವಯವ ಗೊಬ್ಬರಗಳನ್ನು ಬಳಸಿ ಭೂಮಿಯಲ್ಲಿ ನೈಜ ಫಲವತ್ತದೆ ಕಾಪಾಡಿಕೊಳ್ಳಬೇಕು ಎಂದರು.
ಡಿಪಿಜಿ ಸಂಸ್ಥೆ ರಾಜ್ಯ ಸಂಯೋಜಕಿ ಅನಸೂಯ ಮೇಡಿಮಾಕಹಳ್ಳಿ ಗ್ರಾಮದ ರೈತರಿಗೆ ಸಾವಯವ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಡಿಪಿಜಿ ಸಂಸ್ಥೆ ಹೆಚ್ಚಿನ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಎಂದರು. ತಾಲೂಕಿನ ಪ್ರಗತಿಪರ ರೈತ ರಘುನಾಥರೆಡ್ಡಿ, ಪ್ರಕಾಶ್, ರವಿಚಂದ್ರ, ಈಶ್ವರಪ್ಪ, ರಾಮಚಂದ್ರರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ ಸಂಪನ್ಮೂಲ ವ್ಯಕ್ತಿಗಳಾಗಿ, ಸಾವಯವ ಗೊಬ್ಬರಗಳ ತಯಾರಿಕೆ, ಬೀಜೋಪಚಾರ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಿದರು. ಈ ವೇಳೆ ವಾಹಿನಿ ಸಂಸ್ಥೆ ನಿರ್ದೇಶಕ ಎಚ್.ಆರ್. ಸುರೇಶ್, ಕೃಷಿ ಇಲಾಖೆ ಅಧಿಕಾರಿ ಶಂಕರಯ್ಯ, ವಾಹಿನಿ ಸಂಸ್ಥೆಯ ಸಿಬ್ಬಂದಿಗಳಾದ ಚಲಪತಿ, ಸವಿತ, ನಾಗೇಶ್, ರಾಜಶೇಖರ್, ರಮೇಶ್, ಲಕ್ಷ್ಮೀ, ನಾಗೇಶ್ ಹಾಗೂ ಭೂ ಚೇತನ ಅನುವುಗಾರರು, ರೈತ ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement