ಕೆಜಿ ಈರುಳ್ಳಿಗೆ 80; ಗ್ರಾಹಕ ಕಣ್ಣೀರು
ಚಿಂತಾಮಣಿ: ಉತ್ತಮ ಇಳುವರಿ ಇಲ್ಲದೆ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲವಾದುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈರುಳ್ಳಿ ಬೆಲೆ ಕೆಜಿಗೆ ಕನಿಷ್ಠ 70ರಿಂದ 80 ಆಗಿರುವುದರಿಂದ ಜನರು ಈರುಳ್ಳಿ ಕೊಳ್ಳಲು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದ ಹಲವೆಡೆ ಅತಿವೃಷ್ಟಿಯಾಗಿದ್ದರೆ, ಮತ್ತೆ ಕೆಲವೆಡೆ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ವರ್ತಕರು ಈರುಳ್ಳಿ ಬೆಲೆ ಹೆಚ್ಚಿದೆ ಎಂದು ಗ್ರಾಹಕರಿಗೆ ಸಬೂಬು ಹೇಳುತ್ತಿದ್ದಾರೆ. ಏಜೆಂಟರು ಲಾಭದ ಆಸೆಯಿಂದ ಗೋದಾಮುಗಳಲ್ಲಿ ಸ್ಟಾಕ್ ಇಟ್ಟಿದ್ದಾರೆ. ಮಾರುಕಟ್ಟೆನಲ್ಲಿ ಈರುಳ್ಳಿ 80, ಕ್ಯಾಪ್ಸಿಕಮ್ 80, ಹಸಿ ಮೆಣಸಿನಕಾಯಿ 80ರಿಂದ 90 ಆದ ಪರಿಣಾಮ ಜನರು ಕಂಗಾಲಾಗಿದ್ದಾರೆ.