ಚಾಲಕರ ಸಣ್ಣ ತಪ್ಪು ಜೀವವನ್ನೇ ತೆಗೆಯಬಲ್ಲದು
ಗೌರಿಬಿದನೂರು: ಚಾಲಕರು ಮಾಡುವ ಸಣ್ಣ ತಪ್ಪಿನಿಂದ ಹೆಚ್ಚು ನಷ್ಟ ಉಂಟಾಗುತ್ತದೆ ಎಂದು ಸೇಫ್ ಡ್ರೈವ್ ಇಂಡಿಯಾ ಲಿ.ನ ಅಧಿಕಾರಿ ಧೀರೇಂದ್ರ ತಿಳಿಸಿದರು. ಅವರು ಇಂದು ಎಸಿಸಿ ಸಿಮೆಂಟ್ ಕಾರ್ಖಾನೆ ಅವರಣದಲ್ಲಿ ನಡೆದ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕೊಂಡು ಪ್ರಾಣ ರಕ್ಷಣೆ ಹೇಗೆ ಮಾಡಬಹುದು ಎಂಬ ಚಾಲಕರ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ಚಾಲಕರು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಪ್ರಾಣಾಪಾಯ ಸಂಭವಿಸುತ್ತಿದೆ ಎಂದ ಅವರು ಬುರಜೆ ಮಣ್ಣಲ್ಲಿ ವಾಹನ ಇಳಿದಾಗ ರಿವರ್ಸ್‌ಂ ಗೇರ್‌ನಲ್ಲಿ ಹಿಂದಕ್ಕೆ ಬಂದು ಚಲಿಸುವುದೇ ಉತ್ತಮ ಎಂದರು. ಚಾಲನೆಯಲ್ಲಿ ಯಾಂತ್ರಿಕ ದೋಷದಿಂದ ಬ್ರೇಕ್ ಫೆಯಿಲ್ ಆದಾಗ ಟ್ರಕ್‌ಗಳು ಮೊದಲು 5ನೇ ಗೇರ್ ಮತ್ತೆ 3, 2, 1ನೇ ಗೇರ್‌ಗಳನ್ನು ಹಾಕುವ ಮುಖಾಂತರ ವಾಹನವನ್ನು ನಿಲ್ಲಿಸುವುದು ಉತ್ತಮ. ಮುಂದಿನ ವಾಹನಕ್ಕೆ 50 ಅಡಿ ಅಂತರದಲ್ಲಿ ಟ್ರಕ್ ನಿಲ್ಲಿಸಬೇಕು. ಎಡ ಹಾಗು ಬಲ ತಿರುಗಲು ಸೂಚನಾ ದೀಪಗಳನ್ನು ಹಾಕಬೇಕು ನೀವು ಇದನ್ನು ಹಾಕಲು ಮರತರೆ ನಿಮಗೂ ತೊಂದರೆ ಹಾಗೂ ನಿಮ್ಮ ಹಿಂಬದಿ ವಾಹನಗಳಿಗೂ ತೊಂದರೆ. ಇನ್ನೂ ಅನೇಕ ವಾಹನ ಚಾಲನಾ ಸುರಕ್ಷಣೆಯ ಬಗ್ಗೆ ವಿವರಿಸಿದರು. ಅಭಿನವ್ ಘೋತೀದಾರ್ ವಾಹನದ ರಕ್ಷಣೆ ಬಗ್ಗೆ ತಿಳಿಸಿದರು. ಪ್ರಜ್ಙ ಕಲಾತಂಡದವರಿಂದ ರಕ್ಷಾ ಬಂಧನ ಎಂಬ ವಾಹನ ಅಪಘಾತ ಕುರಿತು ನಾಟಕ ಪ್ರದರ್ಶಿಸಲಾಯಿತು. ವೇದಿಕೆಯ ಮೇಲೆ ಜಯಂತ ದತ್ತಗುಪ್ತ, ಪಂಚನಾಥನ್ ಅಯ್ಯರ್, ಕೃಷ್ಣಮೂರ್ತಿ, ರಾಜತ್‌ಕುಮಾರ್ ಇದ್ದರು.
ಇಂದು ಸ್ವಾತಂತ್ರ್ಯ
ದಿನಾಚರಣೆ
ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಆ.15 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇಂದ್ರ ಸಚಿವರಾದ ಡಾ.ಎಂ.ವೀರಪ್ಪಮೊಯ್ಲಿ, ಕೆ.ಹೆಚ್.ಮುನಿಯಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿನ್ನಪ್ಪ, ಶಾಸಕರಾದ ಡಾ.ಕೆ.ಸುಧಾಕರ್, ಎಸ್.ಎನ್.ಸುಬ್ಬಾರೆಡ್ಡಿ, ಕೆ.ಎಂ.ಕೃಷ್ಣಾರೆಡ್ಡಿ, ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯರಾದ ಡಾ.ಎ.ಹೆಚ್.ಶಿವಯೋಗಿಸ್ವಾವು, ವಿಧಾನ ಡಾ.ಮುಮ್ತಾಜ್‌ಅಲಿಖಾನ್, ನಸೀರ್ ಅಹಮದ್, ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ ಮುಂತಾದವರು ಭಾಗವಹಿಲಿದ್ದಾರೆ. ಶಾಲಾ ಮಕ್ಕಳು, ಪೊಲೀಸರು, ಎನ್‌ಸಿಸಿ ಪಥ ಸಂಚಲನ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.