ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು: ಪಿಡಬ್ಲೂಡಿ ಕಾಲೋನಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Rashmi Kasaragodu
Updated On : 16 Aug 2013, 1:01 am

ಮಾಲೂರು: ಇಲ್ಲಿನ ಮಾಸ್ತಿ ರಸ್ತೆಯ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ದೇಶಭಕ್ತಿ ಹೆಚ್ಚಿಸುವಂತಹ ರೀತಿಯಲ್ಲಿ ಸ್ವಾಂತತ್ರ್ಯೋತ್ಸವ ದಿನಾಚರಣೆ ಆಚರಿಸುತ್ತಿರುವುದು ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರು. ಶಾಲೆ ಮುಖ್ಯೋಪಾಧ್ಯಾಯ ಬಹುದ್ದೂರ್ ಸಾಬ್ ಮಾತನಾಡಿ, ನಿರಂತರ ಹೋರಾಟದ ಮೂಲಕ ಗಳಿಸಿರುವ ಸ್ವಾತಂತ್ರ್ಯವನ್ನು ಉತ್ತಮ ನಡತೆಯಿಂದ ರಕ್ಷಿಸಬೇಕು ಎಂದರು. ಜಿ.ಪಂ. ಸದಸ್ಯೆ ಯಲ್ಲಮ್ಮ, ಪ್ಲಾಸ್ಟಿಕ್ ನಿಮೂರ್ಲನಾ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ದಾನಿ ಮಂಜುನಾಥ್ ಮಾತನಾಡಿದರು. ಶಾಲಾ ಸಮಿತಿ ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಗುಟ್ಟಪ್ಪ, ಸದಸ್ಯರಾದ ಮುನಿರಾಜು, ರಾಜಪ್ಪ, ನಾಗೇಶ್ ಇದ್ದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೇವಾದಳದ ಹಿರಿಯ ಕಾರ್ಯಕರ್ತರಾದ ಎಂ.ಮುನಿಸ್ವಾಮಿ, ಸುಧಾಕರ್ ರವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಆಕರ್ಷಕ ಕವಾಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಿಕ್ಷಕ ಎಸ್.ಅಶ್ವತ್ಥನಾರಾಯಣ್ ಸ್ವಾಗತಿಸಿದರು. ಎಸ್.ಸುಮಾ ನಿರೂಪಿಸಿದರು. ಜ್ಯೋತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement