20ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನೆ
ಮಾಲೂರು: ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವವು ಇದೇ ತಿಂಗಳ 20ರ ಮಂಗಳವಾರದಿಂದ 23ರ ಶುಕ್ರವಾರದವರೆಗೆ ನಡೆಯಲಿದೆ. ಪಟ್ಟಣದ ರಾಘವೇಂದ್ರ ಮಠದಲ್ಲಿ ಬ್ರಾಹ್ಮಣರ ಸಂಘದ ವತಿಯಿಂದ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ಮಂಗಳವಾರದಂದು ಸತ್ಯನಾರಾಯಣ ಪೂಜೆ ನಡೆಯಲಿದೆ. ಬುಧವಾರದಂದು ಪೂರ್ವಾರಾಧನೆ, ಗುರುವಾರ ಮಧ್ಯಮಾರಾಧನೆ ಹಾಗೂ ಶುಕ್ರವಾರ ಉತ್ತರಾಧನೆ ನಡೆಯಲಿದೆ. ಮಧ್ಯಾಮಾರಾಧನೆಯಂದು ಬೆಳಗ್ಗೆ 9 ಗಂಟೆಗೆ ರಾಘವೇಂದ್ರಸ್ವಾಮಿಗಳ ರಥೋತ್ಸವ ಏರ್ಪಡಿಸಲಾಗಿದೆ ಎಂದು ಬ್ರಾಹ್ಮಣರ ಸಂಘದ ಶೇಖರ್ ತಿಳಿಸಿದ್ದಾರೆ. ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸಿರುವ ವಿವಿಧ ಸೇವೆಗಳನ್ನೊಗೊಂಡಿದ್ದು, ಸೇವಾಕರ್ತರು ಸೇವೆ ನಿಗದಿಪಡಿಸಿ, ಸೇವಾದಿನ ಆಗಮಿಸಿ ಸಂಕಲ್ಪ ಪಡೆದು ಪೂಜಾ ನಂತರ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸಿದ್ದಾರೆ.