ಕಮ್ಮಿಯಾಗುತ್ತಿರುವ ದೇಶಪ್ರೇಮ: ವಿಷಾದ
ಶ್ರೀನಿವಾಸಪುರ: ಜನರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದೆ. ದೇಶದಲ್ಲಿ ಜಾತಿಯ ಕಾರಣದಿಂದ ಜಾತಿಯಂತೆ ತಾಂಡವವಾಡುತ್ತಿದೆ ಎಂದು ತಾಲೂಕಿನ ಆರಿಕುಂಟೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಕೆ. ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.
ಸಮಾಜಸೇವಾ ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ಸದರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಮಡಿದ ರಾಷ್ಟ್ರ ನಾಯಕರು ಅಂದು ಅವರವರ ಹೆಂಡತಿ, ಮಕ್ಕಳಿಗಾಗಿ ಮತ್ತು ಅವರ ಸಂಸಾರಕ್ಕಾಗಿ ಹೋರಾಡಲಿಲ್ಲ. ಎಲ್ಲಾ ಭಾರತಾಂಬೆಯ ಮಕ್ಕಳಿಗಾಗಿ ಹೋರಾಡಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಣೆ ಮಾಡಿದರು ಎಂದರು.
ಕೆ.ವಿ. ನಾಗರಾಜ್ ಹಾಗೂ ಪತ್ರಕರ್ತರಾದ ವೆಂಕಟೇಶ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ, ಭೀಮರಾಮು ಕಾಂಬೆಳೆ, ನರಸಿಂಹ ಹಾಗೂ ಇತರರು ಇದ್ದರು ಶಿಕ್ಷಕರಾದ ಎನ್. ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿ ಎಂ. ಮುರಳೀಬಾಬು ಸ್ವಾಗತಿಸಿದರು ಸೌಮ್ಯ ಮತ್ತು ಸಂಗಡಿಗರಿಂದ ಪ್ರಾರ್ಥನೆ ನಡೆಯಿತು ಹಾಗೂ ರಾಷ್ಟ್ರಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಜಿ. ಮನೋಜ್(ಪ್ರಥಮ), ನಳಿನಿ (ದ್ವಿತೀಯ), ನಯನ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.