ನಗರದ ವಿವಿಧೆಡೆ 67ನೇ ಅದ್ಧೂರಿ ಸ್ವಾತಂತ್ರ್ಯೋತ್ಸವ
ಕೋಲಾರ: ದೇಶ ಪ್ರೇಮದ ಪ್ರತೀಕವಾದ ಸ್ವಾತಂತ್ರ್ಯ ದಿನಾಚರಣೆಯನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಭಾರತ ಸೇವಾದಳ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾಧ್ಯಕ್ಷ ಬಿ.ಎಂ. ಮುಬಾರಕ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಾರ್ಯದರ್ಶಿ ವಿ.ಪಿ.ಸೋಮಶೇಖರ್, ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎಲ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಜಿ.ಶ್ರೀನಿವಾಸ್, ಸದಸ್ಯರಾದ ಡಾ. ಮೌನಿ, ರಂಗನಾಥ್, ಫಲ್ಗುಣ, ಬಿಇಒ ಕಚೇರಿಯ ಇಸಿಒ ರಾಮಚಂದ್ರರೆಡ್ಡಿ, ಮುನಿಸ್ವಾಮಿ ಗೌಡ, ಮಂಜುನಾಥ್, ಜಿಲ್ಲಾ ಸಂಘಟಕ ವಿ.ಮಂಜುನಾಥ್, ಶಿಕ್ಷಣ ಬೋಧಕ ಶಿವಕುಮಾರ್ ಇದ್ದರು.
ಪತ್ರಕರ್ತರ ಸಂಘ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಧ್ವಜಾರೋಹಣ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ಖಂಚಾಚಿ ಮುನಿರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವಹೊಳ್ಳ, ಕಾರ್ಯದರ್ಶಿ ಸುರೇಶ್ಕುಮಾರ್ ಹಾಗೂ ಸಂಘದ ಸದಸ್ಯರು ಇದ್ದರು.
ಕೋಲಾರ ಎಪಿಎಂಸಿ: ಕೋಲಾರ ಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷೆ ರಾಜರಾಜೇಶ್ವರಿ ಧ್ವಜಾರೋಹಣವನ್ನು ನೇರವೇರಿಸಿ ನಂತರ ನೇಗಿಲಯೋಗಿ ಹಾಡಿನ ನಾಮಫಲಕವನ್ನು ಕಚೇರಿಯ ಆವರಣದಲ್ಲಿ ಅನಾವರಣಗೊಳಿಸಿದರು.
ಉಪಾಧ್ಯಕ್ಷ ವಡಗೂರು ರಾಮು, ಕೃಷ್ಣಪ್ಪ, ನಿರ್ದೇಶರಾದ ಬಣಕನಹಳ್ಳಿ ನಟರಾಜ್, ಹೊಳಲಿ ಪ್ರಕಾಶ್, ಪಾಲಾಕ್ಷ ಗೌಡ, ನಾರಾಯಣಸ್ವಾಮಿ, ಕಾರ್ಯದರ್ಶಿ ನಾರಾಯಣರಾಜು ಸಿಬ್ಬಂದಿ ಕಿರಣ್, ಶಿವಣ್ಣ ಇದ್ದರು.
ಶಾಪೂರು ಗ್ರಾಪಂ: ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ಶಾಪೂರು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಎಂ.ನಾಗರಾಜಪ್ಪ, ಮಾಜಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಡಿ. ಮುನಿವೆಂಕಟಪ್ಪ, ವೆಂಕಟಮುನಿ, ವೆಂಕಟಮುನಿಯಪ್ಪ, ಜಬೀನಾ, ವೆಂಕಟೇಶಾ ಚಾರಿ, ಚೌಡಪ್ಪ, ನೀಲಮ್ಮ, ರೆಡ್ಡಮ್ಮ, ಶ್ರೀನಿವಾಸಗೌಡ, ನಾಗಪ್ಪ, ಮುಖಂಡ ಶ್ರೀನಿವಾಸಪ್ಪ ಇದ್ದರು. ಪಿಡಿಒ ಕೆ.ಎನ್.ಸತ್ಯನಾರಾಯಣ ರೆಡ್ಡಿ ಸರ್ಕಾರದ ಸೂಚನೆಯಂತೆ ಇಂದಿನಿಂದ ಪ್ರತಿದಿನ ಗ್ರಾಪಂ ಕಚೇರಿ ಕಟ್ಟಡ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದ್ದು ಗ್ರಾಮಸ್ಥರು ಸಹಕಾರ ನೀಡುವಂತೆ ಕೋರಿದರು.
ವಡಗೂರು ಶಾಲೆ: ವಡಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೆಂಕಟಗಿರಿಯಪ್ಪಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿತು. ಗ್ರಾಮದ ಮುಖಂಡರಾದ ಪಟೇಲ್ ಮುನಿಯಪ್ಪ, ಮಾಜಿ ಅಧ್ಯಕ್ಷ ಎಸ್.ರಾಮಪ್ಪ, ಉಪಾಧ್ಯಕ್ಷ ಎಂ.ಸೀನಪ್ಪ ಇದ್ದರು. ಈ ಸಂದರ್ಭದಲ್ಲಿ ಬಡ್ತಿ ಹೊಂದಿರುವ ಮುಖ್ಯ ಶಿಕ್ಷಕ ಬಿ.ಅಶ್ವತ್ಥಪ್ಪ ಅವರನ್ನು ಅಭಿನಂದಿಸಲಾಯಿತು.
ಅರಾಭಿಕೊತ್ತನೂರು; ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂಜುಂಡೇಗೌಡ ನೆರವೇರಿಸಿದರು. ಧ್ವಜಾರೋಹಣದ ನಂತರ ಮಕ್ಕಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗ್ರಾಮದ ಮುಖಂಡರಾದ ಸೊಣ್ಣೇಗೌಡ, ಗ್ರಾಪಂ ಸದಸ್ಯ ಎ.ಶ್ರೀಧರ್, ಮುಖಂಡ ಕೆ.ಬಿ.ಮುನಿವೆಂಕಟಪ್ಪ, ಛಾಯಾಗ್ರಾಹಕ ಆನಂದ್ ಮಕ್ಕಳಿಗೆ ಸಿಹಿ ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಡಿ.ಆಶಾ, ಶಿಕ್ಷಕರಾದ ಎಸ್.ರಘುನಾಥ್, ಸಿ.ಎಂ.ವೆಂಕಟರಮಣಪ್ಪ, ಎಂ.ವೆಂಕಟೇಶ್, ಸತೀಶ್ ಎಸ್.ನ್ಯಾಮತಿ, ಸಿ.ಎಲ್.ಶ್ರೀನಿವಾಸಲು, ಸಿ.ಎಂ.ಪ್ರಕಾಶ್, ಶ್ವೇತಾ, ವೈ.ಸುಗುಣ ಇದ್ದರು.
ತಾಲೂಕಿನ ಮಾರ್ಜೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಆರ್.ಮುನಿಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯೋಪಾಧ್ಯಾಯ ಬಿ.ಎಂ.ನಾರಾಯಣಸ್ವಾಮಿ, ಎಸ್ಡಿಎಂಸಿ ಸದಸ್ಯ ಸಿ.ಚಲಪತಿ, ತಾಪಂ ಸದಸ್ಯ ರಾಮಚಂದ್ರಗೌಡ ಇದ್ದರು. ಕ್ಷೀರಭಾಗ್ಯ ಯೋಜನೆಯ ಮಕ್ಕಳಿಗೆ ಹಾಲು ಕುಡಿಯಲು ದಾನಿಗಳ ನೆರವಿನಿಂದ ಶಾಲೆಗೆ ಲೋಟಗಳು, ಕಂಪ್ಯೂಟರ್, ಊಟದ ತಟ್ಟೆಗಳನ್ನು ವಿತರಿಸಲಾಯಿತು.
ಸಿ.ಮುನಿಸ್ವಾಮಿ ಪಬ್ಲಿಕ್ ಸ್ಕೂಲ್: ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ಜಸೀನಾ ಜೋಸೆಫ್, ಶಿಕ್ಷಕರಾದ ಜಾವಿದ್, ಮಧುಮಾಲತಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್ ಬಳಿಯ ಕೆ.ಎಂ.ಕಾರ್ಯಪ್ಪ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿ ಮಕ್ಕಳನ್ನು ಕುರಿತು ಮಾತನಾಡಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸತೀಶ್, ಸಿದ್ದಾರ್ಥ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ದಯಾನಂದ್ ಇದ್ದರು. ಎನ್ಸಿಸಿ ಹಾಗೂ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳಿಂದ ಪಥಸಂಚಲನ ಆಕರ್ಷಣೀಯವಾಗಿತ್ತು. ಶಿಕ್ಷಕಿ ಎ.ಸಿ.ಲಕ್ಷ್ಮೀದೇವಿ ಸ್ವಾಗತಿಸಿ, ಮಾಗೇರಿ ವೆಂಕಟೇಶ್ ನಿರೂಪಿಸಿ, ಕೆ.ವಿ.ಗೋವಿಂದಪ್ಪ ವಂದಿಸಿದರು.
ಜಯಕರ್ನಾಟಕ: ಕೋಲಾರ ನಗರದ ಸರ್ಕಾರಿ ಬಸ್ ನಿಲ್ದಾಣ ಸಮೀಪ ಜಯಕರ್ನಾಟಕ ಆಟೊ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಆಟೊ ಘಟಕದ ಜಿಲ್ಲಾಧ್ಯಕ್ಷ ಎಂ.ವೆಂಕಟಪ್ಪ, ತಾಲೂಕು ಅಧ್ಯಕ್ಷ ಎಂ.ಮಂಜುನಾಥ್ ಹಾಗೂ ಪದಾಧಿಕಾರಿಗಳು ಇದ್ದರು.