ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರೇಕ್ಷಣೀಯ ಸ್ಥಳವಾಗಿ ವಿದುರಾಶ್ವತ್ಥ ಅಭಿವೃದ್ಧಿ

Rashmi Kasaragodu
Updated On : 17 Aug 2013, 1:08 am

ಕ.ಪ್ರ.ವಾರ್ತೆ    ಗೌರಿಬಿದನೂರು    ಆ. 16
ವಿದುರಾಶ್ವತ್ಥ ಕ್ಷೇತ್ರವನ್ನು ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸುವ ದಿಕ್ಕಿನಲ್ಲಿ ಹಲವು ತರಹದ ಆಕರ್ಷಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಡೆಪ್ಯೂಟಿ ಸ್ಪೀಕರ್ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ವಿದುರಾಶ್ವತ್ಥದ ಧ್ವಜ ಸತ್ಯಾಗ್ರಹದ 75ನೇ ವರ್ಷಾಚರಣೆಯಲ್ಲಿ ಮಾತನಾಡಿದರು.
ದೇಶದ ಇತರ ಪ್ರೇಕ್ಷಣಿಯ ಸ್ಥಳಗಳಾದ ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ಮಧುರೈ ಮುಂತಾದ ಸ್ಥಳಗಳ ಹಾಗೆ ಇದನ್ನೂ ಆಕರ್ಷಕ ಸ್ಥಳವನ್ನಾಗಿ ಮಾಡಲಾಗುವುದು. ಇದಕ್ಕಾಗಿ ಹಲವು ಯೋಜನೆಗಳನ್ನು ಯೋಜಿಸಲಾಗಿದೆ. ಆದರೆ ಅವುಗಳನ್ನು ಈಗ ಪ್ರಕಟಿಸುವುದಿಲ್ಲ. ಪ್ರಕಟಿಸದೆ ಮಾಡಿ ತೋರಿಸಬೇಕೆಂಬುದು ನಮ್ಮ ಹಂಬಲವಾಗಿದೆ ಎಂದರು.
ವಿದುರಾಶ್ವತ್ಥವು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಸ್ಥಾನ ಪಡೆದಿರುವಂತೆಯೇ ಪೌರಾಣಿಕ ಕ್ಷೇತ್ರದಲ್ಲೂ ಮಹತ್ವದ ಸ್ಥಾನ ಪಡೆದಿದೆ. ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ ಪಡೆದಿರುವ ಈ ಕ್ಷೇತ್ರದ ಮಹತ್ವವನ್ನು ವಿಶ್ವಕ್ಕೆ ಸಾರಿ ಹೇಳಿ, ವಿಶ್ವದ ಗಮನವನ್ನು ಇತ್ತ ಸೆಳೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ತಾವು ಹೊಂದಿರುವುದಾಗಿ ಹೇಳಿದರು.
ಶಾಸಕ ರಮೇಶ್ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಚಳವಳಿಕಾರರು ನಡೆಸಿದ ವೀರಾವೇಶದ ರೋಮಾಂಚನಕಾರಿ ಹೋರಾಟಗಳು ಇಂದಿನ ಯುವಪೀಳಿಗೆಗೆ ಒಂದು ಕಥೆಯಂತೆ ಪರಿಣಮಿಸಿ ಅದರ ಮಹತ್ವ ಮರೆತುಹೋಗುವಂತಾಗಿದೆ. ಅಂದಿನ ಸ್ವಾತಂತ್ರ್ಯಪ್ರೇಮಿಗಳು ಮಾಡಿದ ತ್ಯಾಗ, ಬಲಿದಾನಗಳ ಮಹತ್ವ ಇವರಿಗೆ ಅರಿವಿಗೆ ಬರದಂತಾಗಿದೆ. ಹೀಗಾಗಿರುವುದು ಕಾಲಗತಿಯ ದುರಂತವೇ ಸರಿ ಎಂದು ವಿಷಾದಿಸಿದರು. ಸ್ವಾತಂತ್ರ ಸಂಗ್ರಾಮದ ಚಿತ್ರಗಳನ್ನು ಮಾರಾಟಕ್ಕಾಗಿ ರಮೇಶ್ಕುಮಾರ್, ವೀರಸೌಧ, ಹುತಾತ್ಮರ ಸ್ತೂಪ ವೀಕ್ಷಿಸಲು ಟಿಕೆಟ್ಗಳನ್ನು ಎಸಿಸಿ ಸಿಮೆಂಟು ಫ್ಯಾಕ್ಟರಿ ಎಂ.ಡಿ.ರಜತ್ಕುಮಾರ್ ಟ್ರಸ್ಟಿ ಬಿಡುಗಡೆಗೊಳಿಸಿದರು. ಪ್ರಜ್ಞಾ ಕಲಾ ತಂಡದವರಿಂದ ಬಾಡಿದ ಚಿಗುರು ನಾಟಕವನ್ನು ಪ್ರದರ್ಶಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಬಿ.ಗಂಗಾಧರಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ, ತಹಸೀಲ್ದಾರ್ ಡಾ. ಎನ್.ಭಾಸ್ಕರ್, ತಾಪಂ ಅಧ್ಯಕ್ಷ ಎಚ್.ಎನ್.ನಿರಂಜನ, ಸದಸ್ಯೆ ಅನಿತಾ ಗಂಗಾಧರ್, ಗ್ರಾಪಂ ಅಧ್ಯಕ್ಷೆ ದೇವಮ್ಮ ಬಿಇಓ ಜಗದೀಶ್, ಎಸಿಸಿ ಸೀಮೆಂಟ್ ಕಾರ್ಖಾನೆಯ ರಜತ್ಕುಮಾರ್, ಜಲಾನ್, ಪುರಸಭಾ ಗೀತಾ ಜಯಂಧರ್ ಉಪಸ್ಥಿತರಿದ್ದರು. ರಮೀಜ ಖಾನಂ ಪ್ರಾರ್ಥಿಸಿ, ಡಾ. ಸಿ.ನಾಗರತ್ನ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement