ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿ ಕೇಂದ್ರದ ಪೊಲೀಸ್ ಠಾಣೆಯಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಠಾಣೆಯ ಆವರಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಉಪ್ಪರಹಳ್ಳಿ ನಾರಾಯಣ ಸ್ವಾಮಿ ಹಾಗೂ ಅಗ್ರಹಾರ ಸುಬ್ಬರಾವ್ ನೆರವೇರಿಸಿದರು.
ನಂತರ ಮಾತನಾಡಿದ ಅವರು 67 ವರ್ಷದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದರೂ ಮಹಾತ್ಮಾ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಕಾರಗೊಳ್ಳದಿರುವುದು ಮಹಾತ್ಮರ ಹೋರಾಟಗಾರರ ತ್ಯಾಗ ಬಲಿದಾನಗಳಿಗೆ ಬೆಲೆಯಿಲ್ಲದಂತಾಗಿದೆ ಎಂದರು.
ಪ್ರಾಮಾಣಿಕವಾಗಿ ಕರ್ತವ್ಯ ಮಾಡಿದವರಿಗೆ ಮಾತ್ರ ಸನ್ಮಾನ ಮಾಡಿದಾಗ ಮಾತ್ರ ನಾವು ಸೂಚಿಸುವ ಗೌರವಕ್ಕೆ ಅರ್ಥಬರುತ್ತದೆ ಎಂದು ಪಿ.ಎಸ್.ಐ ಸುಧಾಕರ್ ರೆಡ್ಡಿ ತಿಳಿಸದರು.
ಸನ್ಮಾನಿತರಾದ ಸ್ವಾತಂತ್ರ್ಯ ಹೋರಾಟಗಾರ ಉಪ್ಪರಹಳ್ಳಿ ಜಿ.ವಿ. ನಾರಾಯಣ ಸ್ವಾಮಿ, ಅಗ್ರಹಾರ ಸುಬ್ಬರಾವ್, ಹಾಗೂ ಉತ್ತಮ ನಾಗರೀಕ ಸೇವೆಗಾಗಿ ನಿವೃತ್ತ ಪಿ.ಎಸ್.ಐ. ಅಶ್ವಥನಾರಾಯಣ, ನಿವೃತ್ತ ಎ.ಎಸ್.ಐ. ಸಂಜೀವರಾಯುಡು, ನಿವೃತ್ತ ಎ.ಎಸ್.ಐ. ಸಾದಪ್ಪ, ನಿವೃತ್ತ ಮುಖ್ಯ ಪೇದೆ ಅಮರನಾಥ್, ಹಾಗೂ ಪತ್ರಕರ್ತ ಕೆ.ಜಿ. ಪ್ರಕಾಶ್ ಅವರನ್ನು ಸನ್ಮಾನಿಸಿಸಲಾಯಿತು. ಠಾಣೆ ಪೊಲೀಸ್ ಸಬ್ಇನ್ಸೆಪೆಕ್ಟರ್ ಸುಧಾಕರ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.