ಅಂದರ್ ಬಾಹರ್: 10 ಮಂದಿ ಬಂಧನ
ಶಿಡ್ಲಘಟ್ಟ: ಇದ್ಲೂಡು ಸಮೀಪ ಹಳೆಯ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಚೆನ್ನರಾಯಪ್ಪ ಎಂಬವರ ಹಳೆಯ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೂಜು ಆಡುತ್ತಿದ್ದರು. ಬಂಧಿತರಿಂದ 83955, 8 ಮೊಬೈಲ್, 11 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚೆನ್ನಕೇಶವ, ನಾಗರಾಜು, ಬಾಬಾಜಾನ್, ಮೆಹಬೂಬ, ಪಾಷಾ, ಪ್ರಸಾದ್, ಮುನಿಯಪ್ಪ, ವಹೀದ್, ಅಮೀರ್ಜಾನ್, ಆನಂದ, ಮಂಜುನಾಥ ಬಂಧಿತ ಆರೋಪಿಗಳಾಗಿದ್ದು, ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಚಿಂತಾಮಣಿಯ ಡಿಎಸ್ಪಿ ಎ.ಬಿ.ದೇವಯ್ಯ, ಶಿಡ್ಲಘಟ್ಟದ ಇನ್ಸ್ಪೆಕ್ಟರ್ ಜಗದೀಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಹನುಮಂತಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.