ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ
ಮುಳಬಾಗಲು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಶನಿವಾರ ಕಾಲೇಜಿನಗೆ ಸಮೀಪದ ಆಸ್ಪತ್ರೆ ಬಳಿ ಹಮ್ಮಿಕೊಂಡಿರುವ ಹಾಗೂ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಬದಿ ಖಾಲಿ ಜಾಗದಲ್ಲಿ ಸ್ವಚ್ಛಗೊಳಿಸಿದರು. ಹೊಂಡಗಳನ್ನು ಅಗೆಸಿ ನಂತರ ಹಲವಾರು ಸಸಿಗಳನ್ನು ನೆಟ್ಟರು. ಪುರಸಭೆಯವರು ಸಸಿಗಳಿಗೆ ಪ್ರತಿ ದಿವಸ ನೀರು ಸರಬರಾಜು ಮಾಡಲು ಎನ್ಎಸ್ಎಸ್ ಅಧಿಕಾರಿ ಶ್ರೀನಿವಾಸ್ ಕೋರಿದರು.