ಮಾರುತಿ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
ಮಾಲೂರು: ಇಲ್ಲಿನ ಮಾರುತಿ ಬಾಲ ಕಾರ್ಮಿಕ ವಿಶೇಷ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಮಿಕ ನಿರೀಕ್ಷಕ ರಾಮಕೃಷ್ಣಪ್ಪ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಮುಂದಿನ ಭವಿಷ್ಯವಾಗಿರುವ ಮಕ್ಕಳನ್ನು ಕಾರ್ಮಿಕ ರಾಗಿ ಮಾಡದೆ ಉತ್ತಮ ಶಿಕ್ಷಣ ಕೊಡಿಸಬೇಕಾಗಿದ್ದು ಎಲ್ಲರ ಜವಾಬ್ದಾರಿಯಾಗಿದೆ. ಪೋಷಕರ ಪ್ರೀತಿ ಇಲ್ಲದೆ ಬೆಳೆಯುತ್ತಿರುವ ಬೀದಿ ಮಕ್ಕಳಲ್ಲಿ ಮಾತೃ ಪ್ರೀತಿ-ದೇಶ ಪ್ರೇಮ ಬೆಳೆಸುವ ರೀತಿಯಲ್ಲಿ ಬಾಲ ಕಾರ್ಮಿಕ ವಸತಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದರು.
ಶಾಲಾ ಸಾಮಗ್ರಿ ವಿತರಣೆ: ಇದೇ ಸಂಧರ್ಭದಲ್ಲಿ ಇಂಡಿಯನ್ ಜಿಮ್ ವತಿಯಿಂದ ಬಾಲಕಾರ್ಮಿಕ ಮಕ್ಕಳಿಗೆ ಸಮವಸ್ತ್ರ ಹಾಗೂ ನೋಟ್ಪುಸ್ತಕ ವಿತರಿಸಲಾಯಿತು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಾಲಕಾರ್ಮಿಕ ಜಿಲ್ಲಾ ಯೋಜನಾ ನಿರ್ದೇಶಕ ಎಂ.ಸಿ.ಲಕ್ಷ್ಮಿನಾರಾಯಣ, ಕ್ಷೇತ್ರಾಧಿಕಾರಿ ಶ್ರೀನಿವಾಸ್, ಮುಖ್ಯ ಶಿಕ್ಷಕಿ ಸುಧಾರಾಣಿ, ಹರಿ ಪ್ರಸಾದ್, ನಾರಾಯಣ್ರಾವ್, ಎಂ.ಲೀಲಾವತಿ, ಗ್ರಾಪಂ
ಸದಸ್ಯ ಎಸ್.ಮುನಿರಾಜು, ನಾರಾಯಣಸ್ವಾಮಿ, ಚಾನ್ಪಾಷ, ಇಂಡಿಯನ್ ಜಿಮ್ ಮುಖ್ಯಸ್ಥ ಮಂಜುನಾಥ್, ಸಂಸ್ಥೆ ಕಾರ್ಯದರ್ಶಿ ಎಂ.ರವೀಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.