ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸಗೊಬ್ಬರ ಮಾರಾಟಗಾರರ ಸಭೆ

Rashmi Kasaragodu
Updated On : 18 Aug 2013, 1:09 am

ಮುಳಬಾಗಲು: ಪಟ್ಟಣದ ತಾಲೂಕು ಭೂ ಬ್ಯಾಂಕ್ ನಿರ್ದೇಶಕರ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಸಭೆ ಶನಿವಾರ ಬ್ಯಾಂಕ್ ಆವರಣದಲ್ಲಿ ನಡೆಯಿತು. ರೈತಾಪಿಗಳಿಗೆ ಸದಾ ಸಹಾಯವಾಗಿ ರಸಗೊಬ್ಬರಗಳನ್ನು ಮಾರಾಟ ಮಾಡುವ ರಸಗೊಬ್ಬರ ವ್ಯಾಪಾರಿಗಳ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ ಬ್ಯಾಂಕ್ ಪ್ರತಿ ದಿವಸ ನಿತ್ಯ ನಿಧಿಯಡಿ 25000 ಸಂಗ್ರಹಿಸುತ್ತಿದೆ. ಇದರಲ್ಲಿ ರಸಗೊಬ್ಬರ ಮಾರಾಟಗಾರರು ಪಾಲುದಾರರಾಗಲು ಕೋರಿದರು. ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವಿ.ಆಂಜನೇಯರೆಡ್ಡಿ, ಬ್ಯಾಂಕ್ ಉಪಾಧ್ಯಕ್ಷ ಗಟ್ಟಪ್ಪ, ನಿರ್ದೇಶಕರಾದ ಎಂ.ಶ್ರೀನಿವಾಸ್, ನಂಗಲಿ ಚಂಗಪ್ಪ., ಅಮರನಾಥ್, ಶ್ರೀಧರ್, ಗೋಪಾಲ್, ಪದ್ಮನಾಭರೆಡ್ಡಿ, ಡಿ.ನಾರಾಯಣಪ್ಪ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement