ವಿಜ್ಞಾನ ವಸ್ತು ಪ್ರದರ್ಶನ: ಇಂದ್ರಜ ರಾಜ್ಯ ಮಟ್ಟಕ್ಕೆ
ಮುಳಬಾಗಿಲು/ಕೋಲಾರ: ಕೆ.ಜಿ.ಎಫ್ನ ಬೆಮೆಲ್ ನಗರದ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಸೈಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪಟ್ಟಣದ ವಾಸವಿ ವಿದ್ಯಾನಿಕೇತನದ 7ನೇ ತರಗತಿ ವಿದ್ಯಾರ್ಥಿನಿ ವಿ.ಇಂದ್ರಜ ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಎಂಬ ಮಾದರಿ ತಯಾರಿಸಿ ಉತ್ತಮ ರೀತಿಯಲ್ಲಿ ವಿವರಣೆ ನೀಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯ ಶಿಕ್ಷಕಿ ಲಕ್ಷ್ಮಿ, ವಿಜ್ಞಾನ ಶಿಕ್ಷಕಿ ಚೈತ್ರ ಮಾರ್ಗದರ್ಶನ ಮಾಡಿದ್ದರು. ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಸನ್ಮಾನಿಸಲಾಯಿತು. ಪುರಸಭಾ ಸದಸ್ಯರಾದ ರಿಯಾಜ್ ಅಹ್ಮದ್, ಅನ್ಸರ್ಪಾಷ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು. ಸಂಸ್ಥೆ ಕಾರ್ಯದರ್ಶಿ ಟಿ.ಆರ್.ನಾಗರಾಜ್, ನಿರ್ದೇಶಕರಾದ ನಾರಾಯಣಮೂರ್ತಿ, ರವಿಕುಮಾರ್, ಮುರಳಿಕೃಷ್ಣ ಇದ್ದರು.