ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಧಾದೇವಿಗೆ ಸನ್ಮಾನ
ಗೌರಿಬಿದನೂರು: ಪಟ್ಟಣದ ಕರೇಕಲ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ, ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ರಾಧಾದೇವಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪುರಸಭೆ ಸದಸ್ಯ ಎಂ.ಮುನಿರಾಜು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶಕ್ಕೆ ದೊರೆತ ಸ್ವಾತಂತ್ರ್ಯದ ಸದ್ಬಳಕೆ ಆಗಬೇಕಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು ಎಂದರು.
ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದ ಬಹುತೇಕರು ಸ್ವಾತಂತ್ರ್ಯದ ಮಹತ್ವ ಬಹುತೇಕರು ಅರಿತಿಲ್ಲ. ಹಿರಿಯರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಹರಿಸಿದ ನೆತ್ತರಿನ ಬೆಲೆ ಇಂದಿನ ಜನತೆಗೆ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಸದಸ್ಯೆ ಲಕ್ಷ್ಮೀಮನೋಹರ್ ಮಾತನಾಡಿದರು.
ಗುರುವಂದನಾ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳಾದ ನಾಗೇಂದ್ರ ಎನ್. ಚೇತನ್, ಮನೋಹರ್, ನಾಗೇಶ್, ಲೋಕೇಶ್, ಪ್ರಿಯಾಂಕ, ವಾಣಿ, ಮಂಜುಳ, ಆಶ್ವತ್ಥ್, ಕಿರಣ್, ಮಸ್ತಾನ್ ಹಾಗೂ ಶರಾ ನಡೆಸಿಕೊಟ್ಟರು. ಇದೇ ವೇಳೆ ಮೇರಿಟೋರಿಯಸ್ ಟ್ಯುಟೋರಿಯಲ್ ವ್ಯವಸ್ಥಾಪಕ ಕೆ.ಸಿ.ನಾಗೇಶ್ ಮಕ್ಕಳಿಗೆ ವಿಶೇಷ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಮುಖ್ಯ ಶಿಕ್ಷಕಿ ರಾಧಾದೇವಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತಾನಾಡಿದರು. ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.