ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚುನಾವಣೆ: ಆಂಜನೇಯರೆಡ್ಡಿಗೆ ಗೆಲವು

Vishwanath S
Updated On : 19 Aug 2013, 12:24 pm

ಕ.ಪ್ರ.ವಾರ್ತೆ ,  ಕೆಜಿಎಫ್ ,  ಆ. 18
ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಬ್ಲುಯುಎಫ್(ವುಫ್) ಜಯ ಗಳಿಸಿದ್ದು, ಪ್ರತಿ ಸ್ಪರ್ಧಿಯಾಗಿ ಕಣದಲ್ಲಿದ್ದ ಜೆಎಸಿಗೆ ತೀವ್ರ ಮುಖಭಂಗ ಉಂಟಾಗಿದೆ.
60 ಸ್ಥಾನಗಳ ಪೈಕಿ ಡಬ್ಲುಯುಎಫ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಂಜನೇಯರೆಡ್ಡಿ ಸೇರಿದಂತೆ 43 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಅದೇ ರೀತಿ ಉಪಾಧ್ಯಕ್ಷ, ಅಧಿಕಾರಿಗಳ ವಲಯದಲ್ಲಿ 8 ಸ್ಥಾನ, ಕಾರ್ಮಿಕ ಸಮಿತಿಯಲ್ಲಿ 8 ಎಲ್‌ಡಬ್ಲುಎಫ್ 4, ಕ್ಯಾಂಟೀನ್ ಸ್ಥಾನದಲ್ಲಿ 7 ಸ್ಥಾನಗಳನ್ನು ಸಹ ಡಬ್ಲುಯುಎಫ್(ವುಫ್) ಪಡೆದುಕೊಂಡಿದೆ.
ಬಿಇಎಂಎಲ್ ಕಾರ್ಖಾನೆಯಲ್ಲಿ 3200 ಕಾರ್ಮಿಕರಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ ಇಸಿ ಸದಸ್ಯ ಹಾಗೂ ವಿವಿಧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾರ್ಮಿಕರ ಒಲವು ಗಳಿಸಲು ಡಬ್ಲುಯುಎಫ್ ಸಂಘಟನೆ ಸಫಲವಾಗಿದೆ. ಜೆಎಸಿ ಸಂಘದ ಅಧ್ಯಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾರ್ಕಂಡಪ್ಪ 1162 ಮತ ಪಡೆದಿದ್ದು, ವುಫ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಂಜನೇಯರೆಡ್ಡಿ 1949 ಮತ ಗಳಿಸಿ 787 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬೆಮೆಲ್ ಕಲಾಕ್ಷೇತ್ರದ ಹೊರಗೆ ನೆರೆದಿದ್ದ ಡಬ್ಲುಯುಎಫ್ ಸಂಘಟನೆಯ ಬೆಂಬಲಿಗರು ಹಾಗೂ ಕಾರ್ಮಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ವೇಳೆ ಮಾತನಾಡಿದ ಡಬ್ಲುಯುಎಫ್ ಅಧ್ಯಕ್ಷ ಆಂಜನೇಯರೆಡ್ಡಿ, ಬೆಮೆಲ್ ಕಾರ್ಮಿಕರ ಮತ್ತು ಕಾರ್ಖಾನೆಯ ಅಭಿವೃದ್ಧಿಗೆ ತಮ್ಮ ಸಂಘಟನೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡಲಾದ 24 ಭರವಸೆಗಳನ್ನು ಸಹ ಈಡೇರಿಸುವುದಾಗಿ ತಿಳಿಸಿದರು.
ಕಾರ್ಮಿಕರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ದೊರಕಿಸಿಕೊಡಲಾಗುವುದು.  ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಬೆಮೆಲ್ ಕಾರ್ಖಾನೆಯ ಅಭಿವೃದ್ಧಿಗೆ ಹೊರ ದೇಶದಿಂದ ಹಾಗೂ ರಕ್ಷಣಾ ಇಲಾಖೆಯಿಂದ ಹೆಚ್ಚು ಉತ್ಪಾದನೆಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ಈ ವೇಳೆ ಚುನಾವಣೆಯಲ್ಲಿ ಜಯ ಗಳಿಸಿದ ನೂತನ ಪದಾಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡ ಸುಂದರರಾಜನ್ ಸೇರಿದಂತೆ ಕಾರ್ಮಿಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement