ಜೂಜು ಅಡ್ಡೆ ಮೇಲೆ ದಾಳಿ: ಬಂಧನ
ಕ.ಪ್ರ.ವಾರ್ತೆ , ಶಿಡ್ಲಘಟ್ಟ , ಆ. 18
ಏಕಕಾಲಕ್ಕೆ 2 ಕಡೆ ಅಂದರ್ ಬಾಹರ್ ಆಡುತ್ತಿದ್ದು ಜೂಜುಕಟ್ಟೆ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿರುವ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಗಾಂಧಿನಗರದ ಬಳಿ ಅಂದರ್‌ಬಾಹರ್ ಆಡುತ್ತಿದ್ದ ಜೂಜುಕಟ್ಟೆ ಮೇಲೆ ದಾಳಿ ನಡೆಸಿದ ಪುರ ಠಾಣೆಯ ಪಿ.ಎಸ್.ಐ ಪುರುಷೋತ್ತಮ್ ಹೂ ಸಿಬ್ಬಂದಿ 7 ಜನರನ್ನು ಬಂಧಿಸಿದ್ದು ಅವರಿಂದ 2,140 ರು. ನಗದು ಹಾಗೂ 5 ಮೊಬೈಲ್‌ಗಳನ್ನು ವಶಪಡಿಸಿಕೊಳಲಾಗಿದೆ. ಆರೋಪಿಗಳನ್ನು ಜಾಮಿನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮಯೂರ ಸರ್ಕಲ್‌ನ ಕಾವೇರಿ ಡಾಬಾ ಹಿಂಬಾಗದಲ್ಲಿ ಅಂದರ್‌ಬಾಹರ್ ಆಡುತ್ತಿದ್ದ 6 ಜನರನ್ನು ಬಂಧಿಸಿದ್ದು ಅವರಿಂದ 750 ರು. ನಗದನ್ನು ವಶಪಡಿಸಿಕೊಳಲಾಗಿದೆ. ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.