ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಿಡಚಲಹಳ್ಳಿ: ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಕಲಿಕಾ ಸಾಮಗ್ರಿ ವಿತರಣೆ

Vishwanath S
Updated On : 19 Aug 2013, 12:26 pm

ಕ.ಪ್ರ.ವಾರ್ತೆ ,  ಗೌರಿಬಿದನೂರು ,  ಆ. 18
ಹೋಬಳಿ ವ್ಯಾಪ್ತಿಯ ಪಿಡಚಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವ ಅಂಗವಾಗಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಬ್ಯಾಗ್ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು.
ಮುಖಂಡ ಪಿ.ಎನ್. ಪ್ರಕಾಶ್ ಮಾತನಾಡಿ ಮುಖ್ಯವಾಗಿ ಹಳ್ಳಿಗಳಲ್ಲಿ ಬಡ ಕುಟುಂಬಗಳ ಮಕ್ಕಳು ಶಾಲೆಗೆ ಬರಲು ಸಹಾಯಹಸ್ತ, ಪ್ರೋತ್ಸಾಹ ಬೇಕು ಎಂದ ಅವರು ಹಳ್ಳಿ ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿ 8 ವರ್ಷಗಳಿಂದ ತಾವು ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ಮಕ್ಕಳಿಗೆ ನೀಡುತ್ತಿರುವುದಾಗಿ ತಿಳಿಸಿದರು. ಗೌರಿಬಿದನೂರು ಪಿಎಸ್‌ಐ ಯಶವಂತ್ ಸಮವಸ್ತ್ರ ನೀಡಿದರು.
ಪಿ.ಜಿ.ರಾಮರೆಡ್ಡಿ, ಕೆ.ರವಿ, ವೆಂಕಟೇಶ್, ಮುಖ್ಯೋಪಾಧ್ಯಾಯ ಚಿಕ್ಕನಾರಾಯಣಪ್ಪ, ಚನ್ನಪ್ಪ ಹಾಗೂ ಪಿ.ಎನ್. ಮುನಿಕೃಷ್ಣೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement