ಕಾನೂನು ಅರಿವು ಇದ್ದಲ್ಲಿ ಜೀವನ ಸುಗಮ: ನ್ಯಾಯಾಧೀಶೆ ರಾಜೇಶ್ವರಿ
ಗೌರಿಬಿದನೂರು: ಕಾನೂನಿನ ಅರಿವು ಇದ್ದಲ್ಲಿ ಜೀವನ ಸುಗಮ ಎಂದು ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶೆ(ಹಿರಿಯ ಶ್ರೇಣಿ) ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ಹೊಸೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿಉದ್ಘಾಟಿಸಿ ಮಾತನಾಡಿದರು. ಗೌರಿಬಿದನೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಮಾತನಾಡಿದರು. ಹಿರಿಯ ವಕೀಲರಾದ ಬಿ. ಲಿಂಗಪ್ಪ. ಎಚ್. ವೆಂಕಟೇಶ್, ಎನ್.ಎಸ್. ಅಶೋಕ ಕುಮಾರ್, ಎಚ್.ಎಲ್. ವೆಂಕಟೇಶ್ ಅವರು ಕಾನೂನಿನ ವಿವಿಧ ಮಜಲುಗಳ ಕುರಿತು ಮಾತನಾಡಿದರು.
ಸೋಮಶೇಖರರೆಡ್ಡಿ, ಎಂ.ಎಸ್. ಆನಂದ, ವಿ.ಸಿ. ಗಂಗಯ್ಯ, ಮುಖ್ಯ ಶಿಕ್ಷಕ ರಾಮಾಂಜನೇಯ ಇದ್ದರು.
ರಾಜಸ್ವ ಇಲಾಖೆ ಸಿಬ್ಬಂದಿ ಹಾಜರಿದ್ದರು. ವಕೀಲ ಜಿ.ಎನ್. ಕೋಮಲ ಸ್ವಾಗತಿಸಿದರು. ವಕೀಲ ಲೋಹಿತ್ ವಂದಿಸಿದರು. ಮಹ್ಮದ್ ಹನೀಫ್ ಪ್ರಾರ್ಥನೆ ಗೀತೆ ಹಾಡಿದರು. ವಕೀಲ ವಿಜಯ ಕುಮಾರ್ ನಿರೂಪಿಸಿದರು.