ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತ್ರಿಕೆಗಳಿಂದ ಸಮಾಜ ತಿದ್ದುವ ಕೆಲಸ: ಶಾಸಕ ರಾಜಣ್ಣ

Vishwanath S
Updated On : 20 Aug 2013, 12:56 pm

ಶಿಡ್ಲಘಟ್ಟ: ಪತ್ರಿಕೆಗಳು ಸಮಾಜ ತಿದ್ದಲು ಕೆಲಸ ಮಾಡುತ್ತಿದೆ ಎಂದು ಶಾಸಕ ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜ ತಿದ್ದಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡಬೇಕು. 10-12 ವರ್ಷಗಳಿಂದ ಶಾಶ್ವತ ನೀರಾವರಿ ಹೋರಾಟ ನಡೆಯುತ್ತಿದ್ದು, ಈಗ ಪ್ರತಿಫಲ ದೊರೆಯಲಿದೆ ಸಾಧ್ಯತೆಯಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ಮಾಧ್ಯಮ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಆತ್ಮಾವಲೋಕನ ಮಾಡಿಕೊಳುವುದೇ ದಿನಾಚರಣೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ರೂಪಸಿ ರಮೇಶ್ ಮಾತನಾಡಿ, ದಿನದ 24 ಗಂಟೆಯೂ ಕೆಲಸ ಮಾಡುವುದು ಪತ್ರಕರ್ತರು. ಆದರೆ ಪತ್ರಕರ್ತರ ಮೇಲೆ ಮಾನಸಿಕ, ದೈಹಿಕ ದೌಜನ್ಯಗಳಾಗುತ್ತಿದೆಯೆಂದು ವಿಷಾದ ವ್ಯಕ್ತಪಡಿಸಿದರು.
ಇಂದು ಪತ್ರಕರ್ತರು ಸಂಕಷ್ಟದಲ್ಲಿ ಸಿಲುಕಿದ್ದು, ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಪತ್ರಕರ್ತರ ಭವನಕ್ಕೆ ನಿವೇಶನವನ್ನು ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಚಂಗಲರಾವ್ ಮಾತನಾಡಿ, ಸ್ವಾತಂತ್ರ್ಯಕ್ಕೂ ಪೂರ್ವ ಪ್ರತಿದಿನ 5 ಗಂಟೆಗೆ ಎದ್ದು ಜನ ಜಾಗೃತಿಯ ಕೆಲಸ ಮಾಡುತ್ತಿದ್ದು, ಸ್ವಾತಂತ್ರ್ಯ ಬರಲು ಹೋರಾಟ ಮಾಡಿರುವುದಾಗಿ, ಸ್ವಾತಂತ್ರ್ಯ ದೊರೆತರೂ ಇಂದು ಸಹ ಸ್ವಾತಂತ್ರ್ಯ ಅರ್ಥಪೂಣವಾಗಿಲ್ಲ. ಸರ್ಕಾರವನ್ನು ನಡೆಸುವ ನಾಯಕರು ಸರಿಯಾದ ದಾರಿಯಲ್ಲಿ ಸರ್ಕಾರವನ್ನು ನಡೆಸುತ್ತಿಲ್ಲವೆಂದು ತಿಳಿಸಿದರು.
ತಾಪಂ ಅಧ್ಯಕ್ಷ ಎರಬಚ್ಚಪ್ಪ ಮಾತನಾಡಿ, ಶಾಶ್ವತ ನೀರಾವರಿ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆಯೆಂದು ತಿಳಿಸಿ, ತನ್ನ ಅಧಿಕಾರಾವಧಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ 5 ಲಕ್ಷ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಚಂಗಲರಾವ್ ಅವರನ್ನು ಸನ್ಮಾನಿಸಲಾಯಿತು. ಆಶಾಕಿರಣ ಅಂಧ ಮಕ್ಕಳಿಂದ ಗಾಯನ ಏರ್ಪಡಿಸಲಾಗಿತ್ತು.
ತಾಲೂಕು ದಂಡಾಧಿಕಾರಿ ಹನುಮಂತರಾಯ, ಸೊ.ಸು. ನಾಗೇಂದ್ರನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಗೌಡ, ಧನಂಜಯರೆಡ್ಡಿ, ಮಳ್ಳೂರು ಶಿವಣ್ಣ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ರಾಮಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement