ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಿಪೇರಿ ನೆಪದಲ್ಲಿ ರಸ್ತೆಗೆ ಕಲ್ಲು

Vishwanath S
Updated On : 20 Aug 2013, 12:57 pm

ಚಿಂತಾಮಣಿ: ಚರಂಡಿ ಕಾಮಗಾರಿ ನೆಪದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಜೆಸಿಬಿ ಚಾಲಕ ಮನಬಂದಂತೆ ರಸ್ತೆಗೆ ಅಡ್ಡಲಾಗಿ ಕಲ್ಲು ಚಪ್ಪಡಿಗಳನ್ನು ಹಾಕಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡಿದ ಕಾರ್ಯವೈಖರಿ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಗೆ ಯಾವುದೇ ಸೂಚನೆ ನೀಡದೆ ಪಟ್ಟಣದ ದೊಡ್ಡಪೇಟೆ ರಸ್ತೆಯ ಬಲಭಾಗದ ಚರಂಡಿ ರಸ್ತೆ ಕಾಮಗಾರಿ ನಡೆಸಲು ಆಗಮಿಸಿ, ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯಲ್ಲಿಯೇ ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳನ್ನು ಹಾಕಲಾಗಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಯಾವುದೇ ಮುನ್ಸೂಚನೆಯೂ ನೀಡದೆ ಮನೆಯ ಮುಂಭಾಗದ ಕಲ್ಲು ಚಪ್ಪಡಿಗಳನ್ನು ತೆಗೆದು ಹಾಕಿರುವುದಕ್ಕೆ ಜೆಸಿಬ ಚಾಲಕನ ವಿರುದ್ಧ ಹರಿಹಾಯ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.
ಟೆಲಿಫೋನ್ ಸಂಪರ್ಕ ಕಡಿತ, ಗ್ರಾಹಕರಿಕೆ ಕಿರಿಕಿರಿ: ದೊಡ್ಡಪೇಟೆ ರಸ್ತೆ ಬದಿಯಲ್ಲಿ ಇರುವ ಭಾರತ್ ಸಂಚಾರ ನಿಗಮದ ದೂರವಾಣಿ ಸಂಪರ್ಕವುಳ್ಳ ತಂತಿಗಳನ್ನೂ ಜೆಸಿಬಿ ಯಂತ್ರದ ಮೂಲಕ ನಾಶಪಡಿಸಿದ ಪರಿಣಾಮ ಈ ಭಾಗದ ಸುತ್ತಮುತ್ತಲಿನ ಟೆಲಿಫೋನ್ ಗ್ರಾಹಕರು ಪರದಾಡುವಂತಾಗಿದೆ.
   ಇಂಟರ್ನೆಟ್ ಸಂಪರ್ಕ ಕಡಿತದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಗ್ರಾಹಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ, ತಕ್ಷಣವೇ ಸಂಪರ್ಕವನ್ನು ಸರಿಪಡಿಸುವಲ್ಲಿ ಮುಂದಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement