ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತುಳಿತಕ್ಕೆ ಒಳಗಾದವರ ಸಾಧನೆಗೆ ಕಾರಣರಾದ ಅರಸು

Vishwanath S
Updated On : 21 Aug 2013, 12:59 pm

ಚಿಕ್ಕಬಳ್ಳಾಪುರ: ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನೆಲ್ಲಾ ಕ್ರೋಡೀಕರಿಸಿ ಅವರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಜೀವನದಲ್ಲಿ ಅಭಿವೃದ್ಧಿ ಸಾಧಿಸಲು ಅವಕಾಶ ಮಾಡಿಕೊಟ್ಟ ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 98ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭೂಮಿ ಇಲ್ಲದವರಿಗೆ ವಿಶೇಷ ಕಾಯ್ದೆ ತಂದು ಉಳುವವನೇ ಒಡೆಯ ಎಂದು ಮಾಡಿ, ಬಡವರಿಗೆ ಭೂಮಿ ಸಿಗುವಂತೆ ಮಾಡಿದರು. ಅಚಲ ನಿರ್ಧಾರದಿಂದ ಯೋಗ್ಯ ಕಾರ್ಯಕ್ರಮಗಳನ್ನು ಕೈಗೊಂಡರು. ಹಾವನೂರು ವರದಿ ಅನುಷ್ಠಾನಕ್ಕೆ ತಂದದ್ದು ಇವರೇ. ಹಿಂದುಳಿದ ವರ್ಗಕ್ಕೆ ಶಿಕ್ಷಣ, ಉದ್ಯೋಗ ನೀಡಲು ಮೀಸಲಾತಿ ತಂದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿಗೂ ಪ್ರಚಲಿತ: ದೂರದೃಷ್ಟಿ ಉಳ್ಳ ದೇವರಾಜ ಅರಸು ಅವರ ನಿರ್ಧಾರಗಳು ಇಂದಿಗೂ ಪ್ರಚಲಿತವಾಗಿವೆ. ಇವರು ಸಮಾಜ, ರಾಜ್ಯದ ಕಲ್ಯಾಣಕ್ಕಾಗಿ ಕೈಗೊಂಡ ನಿರ್ಧಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗುವುದರಲ್ಲಿ ಸಂಶಯವಿಲ್ಲ. ಇವರ ಹೆಸರು ಇಂದು ಶಾಶ್ವತ ನೆಲೆ ಪಡೆದುಕೊಂಡಿದೆ. ಇದು ಇನ್ನಷ್ಟು ಪ್ರಜ್ವಲಿಸಲಿ ಎಂದು ಆಶಿಸಿದರು. ಅರಸು ಅವರನ್ನು ಇಂದಿಗೂ ನೆನೆಯಲು ಕಾರಣ ಇವರು ಕೈಗೊಂಡ ಧಿಟ್ಟ ನಿಲುವು, ನಿರ್ಧಾರಗಳೇ ಕಾರಣ ಎಂದರು.
ಇಂದು ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಇಬ್ಬರು ನಾಯಕರ ಜನ್ಮದಿನ. ರಾಜ್ಯದಲ್ಲಿ ಕೀರ್ತಿ ಗಳಿಸಿದ ದೇವರಾಜ ಅರಸು ಜತೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 69ನೇ ಹುಟ್ಟುಹಬ್ಬ ಕೂಡ ಇಂದೇ ಆಗಿದ್ದು, ಇವರಿಬ್ಬರು ಅಭಿವೃದ್ಧಿಗೆ ನೀಡಿದ ಒತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಪಂ ಸಿಇಒ ನೀಲಾ ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಪ್ರಸಾದ್, ಡಿವೈಎಸ್‌ಪಿ ದೇವಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement