ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಬಿವಿಪಿಯಿಂದ ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಕಾರ್ಯಕ್ರಮ

Vishwanath S
Updated On : 22 Aug 2013, 12:40 pm

ಕೆಜಿಎಫ್: ಇತ್ತೀಚೆಗೆ ರಕ್ಷಾಬಂಧನ ಕಟ್ಟುವುದು ಒಂದು ಮಾದರಿಯಾಗಿ ಪರಿಣಮಿಸಿದ್ದು, ಯಾವುದೇ ಅರ್ಥಪೂರ್ಣವಿಲ್ಲದೆ, ತಪ್ಪು ಕಲ್ಪನೆಯಿಂದ ಇದನ್ನು ಕೆಲವಡೆ ಆಚರಿಸಲಾಗುತ್ತಿದೆ ಎಂದು ಎಬಿವಿಪಿ ಮುಖ್ಯಸ್ಥ ಪ್ರಮೋದ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿದ್ದ ರಕ್ಷಾಬಂಧನ ಕಟ್ಟುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಸ್ಪರ ಸ್ನೇಹಿತ ಮನೋಭಾವದಿಂದ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರನ್ನ್ಬೊರು ರಕ್ಷಿಸಿಕೊಳ್ಳಲು ಕಟ್ಟುವುದೇ ಈ ರಕ್ಷಾಬಂಧನ ಎಂದು ಮನವರಿಕೆ ಮಾಡಿದರು. ಇಂದಿನ ವಿದ್ಯಾರ್ಥಿಗಳು ತಮ್ಮ ದೇಶ ರಕ್ಷಿಸುತ್ತಿರುವ ಭಾರತೀಯ ಸೈನಿಕರ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆಯಬೇಕಿದೆ ಎಂದ ಅವರು, ಪಾಕಿಸ್ತಾನ ಮತ್ತು ಚೀನಾದ ಸೈನಿಕರು ನಮ್ಮ ಭಾರತೀಯ ಸೇನೆಯನ್ನು ನಿರಂತರವಾಗಿ ಹತ್ಯೆ ಮಾಡುತ್ತಿದ್ದಾರೆ. ಜತೆಗೆ ಚೀನಾ 15 ಕಿ.ಮೀ. ವರೆಗೆ ಭಾರತ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದೆ. ಇಂತಹ ಸಮಯದಲ್ಲಿ ದೇಶ ರಕ್ಷಿಸಲು ದೇಶದ ಪ್ರಧಾನಿ ಹಾಗೂ ರಕ್ಷಣಾ ಸಚಿವರು ಸೂಕ್ತ ತಿರ್ಮಾನ ಕೈಗೊಳ್ಳಬೇಕಿದೆ ಎಂದರು.
ಸುಭಾಷಿಣಿ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಜಾನಕಿ, ಉಪನ್ಯಾಸಕರಾದ ವೆಂಕಟರಾಮಪ್ಪ, ಪರಮಚೈತನ್ಯ, ಎಬಿವಿಪಿ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್, ಕಾರ್ಯಕರ್ತರಾದ ದಿಲೀಪ್, ಅಭಿಷೇಕ್, ಶ್ರೀರಾಮ, ಬಾಬು, ಸಾಧು, ನವೀನ್, ಅರುಣ್, ಹರಿಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement