ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭೂರಹಿತಗೆ ಭೂಮಿ ನೀಡಲು ಒತ್ತಾಯ

Vishwanath S
Updated On : 22 Aug 2013, 12:40 pm

ಕೋಲಾರ: ಭೂರಹಿತ ಬಡ ದಲಿತರಿಗೆ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಆತ್ಮವಿಶ್ವಾಸ ವೇದಿಕೆಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೀಸಂದ್ರ ಎಂ.ಎನ್.ಭಾರದ್ವಾಜ್ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಕೋರಿದರು.
ನಂತರ ಮಾತನಾಡಿದ ಅವರು, ದಲಿತರು ಫಾರಂ ನಂ.52 ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರ ಅಹವಾಲುಗಳನ್ನು ತನಿಖೆ ನಡೆಸಿ ಅಕ್ರಮ ಅರ್ಜಿಗಳನ್ನು ವಜಾ ಮಾಡಿ ಅರ್ಹ ಭೂರಹಿತ ದಲಿತರಿಗೆ ಭೂಮಿ ನೀಡುವಂತೆ ಒತ್ತಾಯಿಸಿದರು.
ಬಂಗಾರಪೇಟೆ ತಾಲೂಕಿನ ಬೇತಮಂಗಲದ ಸರ್ವೆ ನಂ. 192ರಲ್ಲಿ 0.26 ಗುಂಟೆ ಜಮೀನಿದ್ದು ಅದರ ಪೈಕಿ 0.08 ಗುಂಟೆ ಜಮೀನು ಸರ್ವೆ ಮಾಡಿಸಿ ಹದ್ದು ಗುರ್ತಿಸಿಕೊಡಬೇಕು. 2004ರ ಜನವರಿ 21ರಲ್ಲಿ ಕೆಲ ಹಿತಾಸಕ್ತಿಗಳು ಅಕ್ರಮ ಖಾತೆ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ದಲಿತರಿಗೆ ಭೂ ಮಂಜೂರಾತಿ ಮಾಡಿ ಹಕ್ಕು ಪತ್ರಗಳು, ನಿವೇಶನಗಳು, ಸರ್ಕಾರಿ ಭೂಮಿಗಳನ್ನು ನೀಡಬೆಕು. ಎಲ್ಲಾ ದಲಿತ ಕಾಲೋನಿಗಳನ್ನು ಅಭಿವೃದ್ಧಿಪಡಿಸಬೇಕು. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ತಿಳಿಸಿದರು.
ಈ ವೇಳೆ ಆತ್ಮವಿಶ್ವಾಸ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್.ಶಾಮ್ ಸುಂದರ್, ರಾಜ್ಯ ಉಪಾಧ್ಯಕ್ಷ ಎಂ.ಡಿ.ನಯಾಜ್ ಅಹ್ಮದ್, ತಾಲೂಕು ವಿದ್ಯಾರ್ಥಿ ಘಟಕದ ಯುವ ಅಧ್ಯಕ್ಷ ಸುದರ್ಶನ್, ಮುದುಗುಳಿ ಕುಮಾರ್, ಬಿ.ಆಕಾಶ್, ದಲಿತ್ ನಾರಾಯಣಸ್ವಾಮಿ, ಆವಣಿ ನಾಗರಾಜ್, ಖಾದ್ರಿಪುರ ವೆಂಕಟಾಚಲಪತಿ, ಬೇತಮಂಗಲ ರಮೇಶ್, ಸಿ.ವಿ.ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement