ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿಗೆ ಕದಲದಂತೆ ಮಾಡಿದ ಸರಣಿ ಪ್ರತಿಭಟನೆಗಳು

Vishwanath S
Updated On : 24 Aug 2013, 1:19 am

ಕೋಲಾರ: ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಅಧಿಕಾರ ಸ್ವೀಕರಿಸಿ ಐದು ದಿನಗಳು ಕಳೆದಿದ್ದು ಸುಮಾರು 20ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಕಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ದಿನವೇ ನಾಲ್ಕು ಪ್ರತಿಭಟನೆಗಳನ್ನು ಕಂಡ ಜಿಲ್ಲಾಧಿಕಾರಿಗಳು ಬುಧವಾರ ಮತ್ತು ಗುರುವಾರದಂದು ತಲಾ 6 ಪ್ರತಿಭಟನೆಗಳನ್ನು ಎದುರಿಸಿ ಪ್ರತಿಯೊಬ್ಬರಿಗೂ ಸಮಾಧಾನಕರ ಉತ್ತರ ನೀಡಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಗೆ ಯಾವುದೇ ಹೊಸ ಜಿಲ್ಲಾಧಿಕಾರಿ ಬಂದಾಗ ಈ ರೀತಿಯ ಪ್ರತಿಭಟನೆಗಳ ಸ್ವಾಗತ ನೀಡುವುದು ವಾಡಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ಜಿಲ್ಲಾಧಿಕಾರಿ ತಮ್ಮ ವ್ಯಾಪ್ತಿಗೆ ಸೇರಿದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸುವುದಕ್ಕಿಂತ ಸರಣಿ ಪ್ರತಿಭಟನೆಗಳನ್ನು ಕಾಣುವುದೇ ದೊಡ್ಡ ಕೆಲಸವಾಗಿರುವುದರಿಂದ ಆಡಳಿತದ ಕಡೆ ಗಮನ ನೀಡುವುದಕ್ಕೆ ಕಾಲಾವಕಾಶ ಸಿಗದಂತಾಗಿದೆ.
ಒಂದು ರೀತಿಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದಿರುವ ಸರಣಿ ಪ್ರತಿಭಟನೆಗಳಿಂದಾಗಿ ವಿವಿಧ ಸಂಘಟನೆಗಳ ಮುಖಂಡರ ಪರಿಚಯದ ಜೊತೆಗೆ ಪ್ರಮುಖ ಸಮಸ್ಯೆಗಳನ್ನು ತಿಳಿಯುವುದಕ್ಕೆ ಅನುಕೂಲವಾಗಿದೆ. ಆದರೆ ಇದೇ ರೀತಿ ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಾ ಹೋದರೆ ಜಿಲ್ಲಾ ಪ್ರವಾಸ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವುದು ಕಷ್ಟವಾಗಬಹುದೆಂದು ಅಭಿಪ್ರಾಯಿಸಿರುವ ಪ್ರಜ್ಞಾವಂತ ನಾಗರಿಕರು, ಜಿಲ್ಲಾಧಿಕಾರಿಗಳು ಪ್ರತಿಭಟನೆಗಳಿಗೆ ಕಡಿವಾಣ ಹಾಕಲು ಆಡಳಿತ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದ್ದಾರೆ.
ಆ.26ರಂದು ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಭಾಂಗಣದಲ್ಲಿ ಸಭೆಯನ್ನು ಕರೆದಿರುವ ಜಿಲ್ಲಾಧಿಕಾರಿಗಳು ಕಳೆದ 5 ದಿನಗಳಲ್ಲಿ ಸ್ವೀಕರಿಸಿರುವ ಮನವಿ ಪತ್ರಗಳಲ್ಲಿ ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸಲು ಹಾಗೂ ತಾಲೂಕು ಪ್ರವಾಸ ಕೈಗೊಂಡು ಜನತೆಯ ಸಮಸ್ಯೆ ಅರಿಯಲು ವಿಶೇಷ ಜನಸಂಪರ್ಕ ಸಭೆಗಳನ್ನು ಆಯೋಜಿಸುವ ಮೂಲಕ ಹೊಸ ಪರಂಪರೆಯನ್ನು ಹುಟ್ಟು ಹಾಕಿದಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಪ್ರತಿಭಟನಾಕಾರರು ಕೋಲಾರಕ್ಕೆ ಬರುವುದನ್ನು ತಪ್ಪಿಸಿ, ತಾಲೂಕು ಮಟ್ಟದಲ್ಲೇ ಸಮಸ್ಯೆ ನಿವಾರಣೆ ಆಗುವಂತೆ ಮಾಡಿದರೆ ಜಿಲ್ಲಾ ಆಡಳಿತ ಸುಸೂತ್ರವಾಗಿ ನಡೆಯುವುದಕ್ಕೆ ಅವಕಾಶವಾಗುತ್ತದೆ ಎಂಬುದು ಪ್ರಜ್ಞಾವಂತ ಜನತೆಯ ಒತ್ತಾಸೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement