ದಲಿತರ ಮೇಲೆ ದೌರ್ಜನ್ಯ ತಡೆ ಸಭೆ ನಡೆಸಲು ಆಗ್ರಹ
ಮುಳಬಾಗಲು: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಸಭೆ ನಡೆಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಶನಿವಾರ ದಲಿತ ಭೀಮ ಸೇನಾ ಕಾರ್ಯಕರ್ತರು ಮತ್ತು ದಸಸಂ(ಸಂಯೋಜಕ) ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಧರಣೆ ನಡೆಸಿ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿ ದಲಿತರ ಮೇಲೆ ದೌರ್ಜನ್ಯ ತಡೆ ಸಭೆ ನಡೆಸಲು ಒತ್ತಾಯಿಸಿದರು.
ದಲಿತ ಭೀಮ ಸೇನೆ ಕೋಲಾರ ಜಿಲ್ಲಾಧ್ಯಕ್ಷ ಆವಣೆ ಸತೀಶ್ ಮಾತನಾಡಿ, ತಾಲೂಕಿನಲ್ಲಿ ದಲಿತರ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ದಲಿತರ ಮೇಲೆ ದೌರ್ಜನ್ಯಗಳನ್ನು ತಡೆಯಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ದೂರಿದರು. ಸರ್ಕಾರದ ಸುತ್ತೋಲೆಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ತಾಲೂಕು ಮಟ್ಟದಲ್ಲಿ ದಲಿತರ ಸಮಸ್ಯೆಗಳನ್ನು ಚರ್ಚೆಸಿ ಪರಿಹಾರ ಸೂಚಿಸಲು ಅವಕಾಶವಿದ್ದು, ತಕ್ಷಣ ಸಭೆ ಕರೆಯಲು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಯೋಜಕ ಸಂಗಸಂದ್ರ ವಿಜಯಕುಮಾರ್ ಮಾತನಾಡಿ, ತಾಲೂಕಿನಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ ತಕ್ಷಣ ಸಭೆ ಕರೆಯಲು ಒತ್ತಾಯಿಸಿದರು. ಆರ್. ಶಂಕರಪ್ಪ, ಮಹಮದ್ ಸನಾಉಲ್ಲಾ, ಎನ್.ಎಂ. ಕುಮಾರ್ ಹಾಜರಿದ್ದರು.