ಶುರುವಾಗಿದೆ ರಾಜಕೀಯ ಲೆಕ್ಕಾಚಾರ
ಚಿಕ್ಕಬಳ್ಳಾಪುರ ನಗರಸಭೆ 31 ವಾರ್ಡುಗಳನ್ನು ಹೊಂದಿದ್ದು, ಕಾಂಗ್ರೆಸ್ 8 (ಬಂಡಾಯ- 2 ಕಾಂಗ್ರೆಸ್ ಹೊರತುಪಡಿಸಿ), ಜೆಡಿಎಸ್ 11, ಪಕ್ಷೇತರ 11, ಬಿಎಸ್ಆರ್ ಕಾಂಗ್ರೆಸ್ 1 ಸ್ಥಾನವನ್ನು ಹೊಂದಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಎತ್ತ ವಾಲುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದ್ದು, ಜೆಡಿಎಸ್ನ ಬಿ.ಎಲ್. ಕೇಶವ್ಕುಮಾರ್ (1ನೇ ವಾರ್ಡು), ಬಿಎಸ್ಆರ್ ಕಾಂಗ್ರೆಸ್ನ್ ಬಿ. ಸಾವಿತ್ರಿ (11ನೇ ವಾರ್ಡು) ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿರುವ ಬಿಎಬಿ ವರ್ಗಕ್ಕೆ ಸೇರಿದ್ದಾರೆ. ಇನ್ನೂ ಕಾಂಗ್ರೆಸ್ನ ರತ್ನಮ್ಮ(3ನೇ ವಾರ್ಡು), ಜೆಡಿಎಸ್ನ ಜಯಮ್ಮ(20ನೇ ವಾರ್ಡು), ಪಕ್ಷೇತರ ಸದಸ್ಯರಾದ ಜಬೀನ್ ತಾಜ್(21ನೇ ವಾರ್ಡು) ಮತ್ತು ಎ.ಸಿ. ಶೋಭಾ ಮಂಜುನಾಥ್(26ನೇ ವಾರ್ಡು) ಅವರು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿರುವ ಬಿಸಿಎ( ಮಹಿಳೆ) ಮೀಸಲಾತಿಗೆ ಸೇರಿದ್ದಾರೆ. ಇಲ್ಲಿ ಜೆಡಿಎಸ್ ಬಹುಮತವನ್ನು ಹೊಂದಿರುವುದರಿಂದ ಬಿ.ಎಲ್. ಕೇಶವ್ಕುಮಾರ್ ಅಧ್ಯಕ್ಷ ಗಾದಿಗೆ ಸುಲಭವಾಗಿ ಆಯ್ಕೆಯಾಗಬಹುದಾಗಿದ್ದು ಒಂದೇ ಸ್ಥಾನ ಹೊಂದಿರುವ ಬಿಎಸ್ಆರ್ ಕಾಂಗ್ರೆಸ್ಗೆ ಅಧ್ಯಕ್ಷ ಸ್ಥಾನ ಒಲಿಯುವುದು ಕಷ್ಟವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಲಿದೆ. ಇಲ್ಲಿ ಕೊನೆಯ ಕ್ಷಣದಲ್ಲಿ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಹೊಡೆಯುವುದನ್ನು ಸಹ ತಳ್ಳಿ ಹಾಕುವಂತಿಲ್ಲ.