ಕಾಂಗ್ರೆಸ್ ನಾಯಕರಿಂದ ಜಮೀನು ಒತ್ತುವರಿ: ಬಿಜೆಪಿ
ಗೌರಿಬಿದನೂರು: ಸಜ್ಜನರು ಪ್ರಾಮಾಣಿಕರು ಎಂಬ ಮುಖವಾಡ ಧರಿಸಿ ಓಡಾಡುವ ಕಾಂಗ್ರೆಸ್ ಮುಖಂಡರು ಇದೀಗ ಮರಳೂರು ಗ್ರಾಮದ ಸರ್ವೆ ನಂ 49ಣ2 ರ 47.29 ಗುಂಟೆ ಪೈಕಿ 8.20 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಮ್. ರವಿನಾರಾಯಣರೆಡ್ಡಿ ತಿಳಿಸಿದರು.
ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡ ಮರಳೂರು ಸರ್ವೆ ನಂ.49ಣ2ರ17ಎಕರೆ 29ಗುಂಟೆ ಜಮೀನಿನ ಪೈಕಿ 8ಎಕರೆ 20ಗುಂಟೆ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.
ಒತ್ತುವರಿಯಾಗಿರುವ ಬಗ್ಗೆ ಒತ್ತುವರಿ ಮಾಡಿಕೊಂಡಿರುವ ಎಲ್. ಜಯಂತಿ ಕೋಂ ರಘುನಾಥರೆಡ್ಡಿ ಅವರಿಗೆ ತಹಶೀಲ್ದಾರೆ ನೊಡೀಸ್ ನೀಡಿದ್ದು ಕಸಬಾ ಹೋಬಳಿಯ ಮರಳೂರು ಗ್ರಾಮದ ಸರ್ವೆ ನಂ 49-2ರ 17 ಎಕರೆ 29 ಗುಂಟೆ ಪೈಕಿ 8.20 ಗುಂಟೆ ಸರ್ಕಾರಿ ಖರಾಬ್ ಒತ್ತುವರಿ ಮಾಡಿರುವುದರಿಂದ ಹಾಗೂ ದಿನಾಂಕ 12-8-2013ರಂದು ಸಂಬಂಧಪಟ್ಟ ತಾಲೂಕು ಸರ್ವೇಯರ್ ವರದಿ ನೀಡಿದ್ದು, ಸರ್ಕಾರಿ ಖರಾಬ್ ಒತ್ತುವರಿ ಮಾಡಿರುವುದರಿಂದ ಕರ್ನಾಟಕ ಭೂಕಂದಾಯ ನಿಯಮ 1964ರ ಕಲಂ 39 ಮತ್ತು 67ನ್ನು ಅಳವಡಿಸಿ ಕಲಂ 94ರಲ್ಲಿ ನಿರ್ಧಿಷ್ಟಪಡಿಸಿರುವಂತೆ ನೊಟೀಸ್ ನೀಡಲಾಗಿದ್ದು ತಕ್ಷಣವೇ 8ಎ 20 ಗುಂಟೆ ಸರ್ಕಾರಿ ಖರಾಬ್ ಒತ್ತುವರಿ ತೆರವು ಗೊಳಿಸದಿದ್ದಲ್ಲಿ ತೆರವು ಕ್ರಮಗೊಳಿಸಲು ಕ್ರಮ ಜರುಗಿಸಿ, ತೆರವುಗೊಳಿಸಲು ತಗಲುವ ವೆಚ್ಚವನ್ನು ಭೂಕಂದಾಯ ನಿಯಮದಂತೆ ವಸೂಲಿ ಮಾಡಲಾಗುವುದು ಕ್ರಿಮಿನಲ್ ಮೊಕದ್ದಮೆ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ ಮಾತನಾಡಿ ಬಿಜೆಪಿ ಮಂಡಲ ಘಟಕ ವತಿಯಿಂದ ಕಾಂಗ್ರೆಸ್ ಭೂಗಳ್ಳರ ವಿರುದ್ಧ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆಗೆ ಮುನ್ನ ಸಾರ್ವಜನಿಕರಿಗೆ ಸುಳ್ಳು ಭರವಸೆಗಳು ನೀಡಿ ಗೆದ್ದ ಮೇಲೆ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ ಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಜೊತೆಗೆ ಇವರ ಸೊಗಲಾಡಿತನ ಬಟಾಬಯಲಾಗಿರುವುದು ಜನ ಸಾಮಾನ್ಯರಿಗೆ ಇದೀಗ ಅರಿವಾಗಿದೆ ಎಂದು ವ್ಯಂಗ್ಯವಾಡಿದರು.
ಧರಣಿಯಲ್ಲಿ ಬಿಜೆಪಿ ಮುಖಂಡರಾದ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ, ಜಿಂಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹ ಮೂರ್ತಿ, ಡೈರಿ ರಮೇಶ್, ಜೆ.ಪಿ. ಹನುಮೇಗೌಡ, ಮಂಡಲ ಘಟಕದ ಅಧ್ಯಕ್ಷ ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಸಿ.ಎ. ನಾಗರಾಜು, ಶಶಿಧರ್, ಜಯಕ್ಷಮ್ಮ, ಮುನಿಲಕ್ಷಮ್ಮ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.