ಪಾರಂಡಹಳ್ಳಿ ವ್ಯ. ಸಹಕಾರ ಸಂಘಕ್ಕೆ ಹತ್ತು ಸದಸ್ಯರ ಅವಿರೋಧ ಆಯ್ಕೆ
ಕೆಜಿಎಫ್: ಕ್ಷೇತ್ರದ ಪಾರಂಡಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ 2013 ಹಾಗೂ 2018ರವರೆಗೆ ಸಂಘದ 10 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕೆ.ವಿ.ರಾಧಾಕೃಷ್ಣ ಅವರು ತಿಳಿಸಿದ್ದಾರೆ.
ಪಾರಂಡಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಮುಖಂಡರು ಹಾಗೂ ಮಾಜಿ ಸದಸ್ಯ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಪಾರಂಡಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅವಿರೋಧ ಆಯ್ಕೆಯಾದ ಸದಸ್ಯರು- ಗಂಟ್ಲರೆಡ್ಡಿ (ನಾಚಾಂಡ್ಲಹಳ್ಳಿ ಗ್ರಾಮ), ವೆಂಕಟೇಶ್ (ಕಂಬಂಪಲ್ಲಿ ಗ್ರಾಮ), ಸುಜಾತ ನಾರಾಯಣಪ್ಪ (ಕಾವೇರಹಳ್ಳಿ), ಎಲ್.ಗೋವಿಂದರೆಡ್ಡಿ (ಪಾರಂಡಹಳ್ಳಿ), ಶಿವಕುಮಾರ್ (ಪಾರಂಡಹಳ್ಳಿ), ಎಂ.ಮುನಿಯಪ್ಪ (ಅಡಂಪಲ್ಲಿ ಗ್ರಾಮ), ಎಂ.ಕೃಷ್ಣಾರೆಡ್ಡಿ (ಬೀರನಕುಪ್ಪ ಗ್ರಾಮ), ಬಲರಾಮ್ (ಪಾರಂಡಹಳ್ಳಿ), ಕೃಷ್ಣಾರೆಡ್ಡಿ (ಪಾರಂಡಹಳ್ಳಿ), ಎಂ.ಜಗನಾಥ್ (ಪಾರಂಡಹಳ್ಳಿ ಗ್ರಾಮ) ಅವರುಗಳು ಅವಿರೋಧ ಆಯ್ಕೆಯಾಗಿದ್ದು ಮುಂದಿನ 15 ದಿನದೊಳಗೆ ಎಲ್ಲಾ 10 ಮಂದಿ ಸದಸ್ಯರುಗಳ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಕೆ.ವಿ.ರಾಧಾಕೃಷ್ಣ ಅವರು ತಿಳಿಸಿದರು.
ಈ ವೇಳೆ ಜಿಲ್ಲಾಪಂಚಾಯಿತಿ ಸದಸ್ಯ ಆರ್.ನಾರಾಯಣರೆಡ್ಡಿ, ಬೇತಮಂಗಲ ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಪಾರಂಡಹಳ್ಳಿ ಗ್ರಾಮ.ಪಂ. ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ, ತಾಲೂಕು ಪಂಚಾಯಿತಿ ಸದಸ್ಯ ರಮೇಶ್, ಮುಖಂಡರಾದ ವೆಂಕಟರಾಮ್, ಬಾಲಕೃಷ್ಣ ಸೇರಿದಂತೆ ಗ್ರಾಮದ ಇತರೆ ಮುಖಂಡರು ಗ್ರಾಮಸ್ಥರು ಹಾಜರಿದ್ದರು.