ರಾಜ್ಯದಲ್ಲಿ ಪ್ರಮುಖ ಮಠಗಳಿಂದ ಶೈಕ್ಷಣಿಕ ಕ್ರಾಂತಿ: ಶಾಸಕ
ಕ.ಪ್ರ.ವಾರ್ತೆ , ಮಾಲೂರು , ಆ.26
ರಾಜ್ಯದಲ್ಲಿ ಪ್ರಮುಖ ಮಠಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕ್ರಾಂತಿ ಮಾಡುತ್ತಿದ್ದು, ಅವುಗಳನ್ನು ಗ್ರಾಮಾಂತರ ಪ್ರದೇಶ ಮಠಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ತಾಲೂಕಿನ ತೂರ್ನಹಳ್ಳಿ ಪಂಚಾಯಿತಿ ಬೆಳ್ಳಾವಿ ಗ್ರಾಮದ ಬೆಳ್ಳಿನ ಪುರಿ ವೀರಧರ್ಮ ಸಂಸ್ಥಾನ ಮಠದಲ್ಲಿ ದಿ.ಬಿ.ವಿ.ಚೆನ್ನವೀರದೇವರ ವೇದಿಕೆಯಲ್ಲಿ ನಡೆದ ಬಸವ ಜಯಂತಿ, ಶಿವದೀಕ್ಷೆ, ರೇಣುಕಾಚಾರ್ಯ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮಠಗಳು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರದ ಬಾಧ್ಯತೆಯನ್ನು ಕಡಿಮೆ ಮಾಡಿದೆ. ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಯುವ ಮಠ ಶಿಕ್ಷಣದಿಂದ ವಿದ್ಯಾರ್ಥಿಗಳ ಸಮಗ್ರ ವಿಕಸತನಕ್ಕೆ ಸಹಕಾರಿಯಾಗಲಿದೆ ಎಂದರು.
ತಾಲೂಕಿನಲ್ಲಿ ಬೆಳ್ಳನ ಪುರಿ ಒಂದೇ ಮಠ ಕಾರ್ಯಶೀಲವಾಗಿದ್ದು, ಅದಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸರ್ವ ಮೂಲಭೂತ ಸೌಕರ್ಯ ಒದಗಿಸಿ ಕೊಡಲಾಗುವುದು ಎಂದು ಶಾಸಕರು ಹೇಳಿದರು.
ರಾಜಾಪುರ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹುಣಸಮಾರನಹಳ್ಳಿ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ,ಬಳ್ಳನ ಪುರ ಪಂಚಾಕ್ಷರಿ ಶಿವಾಚಾರ್ಯ, ನಾಗಲಾಪುರ ತೇಜಲಿಂಗೇಶ್ವರ ಸ್ವಾಮೀಜಿ, ಬೆಳ್ಳಾವಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ನರೆದಿದ್ದ ಭಕ್ತಾಧಿಗಳಿಗೆ ಅಶೀರ್ವಚನ ನೀಡಿದರು.
ಇದೇ ಸಂದರ್ಭಧಲ್ಲಿ 140 ವೀರಶೈವ ಸಮುದಾಯದ 140 ಮಂದಿಗೆ ಶಿವದೀಕ್ಷೆ ನೀಡಲಾಯಿತು. ಶಾಸಕ ಮಂಜುನಾಥ್ ಗೌಡ, ವಿದ್ವಾನ್ ಜ್ಞಾನಮೂರ್ತಿ, ಭುವನೇಶ್ವರಿ ಕಾಲ ಸಂಘದ ಅಧ್ಯಕ್ಷ ಕಲಾ ರತ್ನ ರಾಮರೆಡ್ಡಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಲಿಂಗೇಶ್ವರಯ್ಯ, ಕೃಷಿ ಇಲಾಖೆಯ ನಿವೃತ್ತಿ ನೌಕರ ಎಂ.ನಾಗರಾಜ್ ಹಾಗೂ ನಿವೃತ್ತ ಶಿಕ್ಷಕ ಪಿ. ನಾಗರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
2012-13 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಶೇ.75 ರಷ್ಟು ಅಂಕ ಪಡೆದ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ಮಾಡಲಾಯಿತು. ಜಿ.ಪಂ. ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಚೆನ್ನಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಷಮ್ಮುಖಯ್ಯ, ಯೋಗೇಶ್, ಅಕ್ಕನ ಬಳಗದ ವನಜಮ್ಮ, ಮಾಗೇರಿ ನಾಗರಾಜಪ್ಪ,ನಂಜಪ್ಪ, ಮುಳಬಾಗಿಲಿನ ಎಂ.ಕಿಶೋರ್ ಕುಮಾರ್, ಮಲ್ಲಿಕಾರ್ಜುನಯ್ಯ, ಹನುಮಂತಯ್ಯ, ಬಸವಯ್ಯ, ಶಿವಶಂಕರ್, ಬಿ.ವಿ. ವೀರಭದ್ರಯ್ಯ, ಶಿವಶಂಕರ್, ವಿಜಯ ಕುಮಾರ್,ಬಿ.ವಿ. ಸೋಮಶೇಖರ್, ವಿಶ್ವನಾಥ್, ಪಾಪಣ್ಣ, ಸೋಮಶೇಖರ್, ಭದ್ರಪ್ಪ, ಶಶಿಕುಮಾರ್, ನಂಜುಂಡಪ್ಪ ಇದ್ದರು.