'ಹಸಿರು ಬೆಳೆಸುವ ಮೂಲಕ ಪರಿಸರ ಉಳಿಸಿ'
ಮಾಲೂರು: ಪ್ರಿಸ್ಟೇಜ್ ಗ್ರೂಪ್ಸ್ ಪಟ್ಟಣದಲ್ಲಿ ಹಸಿರು ಬೆಳೆಸುವ ಪ್ರಯತ್ನ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೇಶವಮೂರ್ತಿ ಹೇಳಿದರು.
ಅವರು ಪೊಲೀಸ್ ಪೇರೆಡ್ ಮೈದಾನದಲ್ಲಿ ಸ್ಥಳೀಯ ಪ್ರೀಸ್ಟೇಜ್ಗ್ರೂಪ್ಸ್ ಅರಣ್ಯ ಇಲಾಖೆ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇತ್ತೀಚೆಗೆ ಸಂಘಗಳನ್ನು ಸ್ವಅಭಿವೃದ್ಧಿಗಾಗಿ ಉಪಯೋಗಿಸಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರಿಸ್ಟೇಜ್ ಗ್ರೂಪ್ಸ್ ಸಂಘಟನೆ ಪಟ್ಟಣದಲ್ಲಿ ಹಸಿರು ಬೆಳೆಸುವ ಮೂಲಕ ಪರಿಸರ ಉಳಿಸುವ ಪ್ರಯತ್ನ ಇತರೆ ಸಂಘಗಳಿಗೆ ಮಾದರಿಯಾಗಲಿದೆ ಎಂದರು.
ಸಂಘಟನೆ ಅಧ್ಯಕ್ಷ ಎಂ.ವಿ. ವೇಮನ ಮಾತನಾಡಿ ಸಮಾನಮಸ್ಕರ ತಂಡವಾಗಿರುವ ಪ್ರಿಸ್ಟೇಜ್ಗ್ರೂಪ್ಸ್ ಪಟ್ಟಣದಲ್ಲಿ 5 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮುಂದಿನ ದಿನಗಳಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರಿಗೆ ಪುರಸ್ಕರ ಮಾಡುವ ಜತೆಯಲ್ಲಿ ಅವರ ವಿದ್ಯಾಭ್ಯಾಸದ ಶುಲ್ಕವನ್ನು ಸಂಘ ಭರಿಸಲಿದೆ ಎಂದರು.
ಸಂಘದ ಬಾಲಾಜಿ ಸಿಂಗ್, ವೆಂಕಟೇಶ್, ಎಂ.ಎನ್. ಕುಮಾರ್, ಬೆಮಲ್ಗೋಪಾಲ್, ದೇವರಾಜ್, ಶಿವು ಕುಮಾರ್, ಅಶ್ವಥ್ಗೌಡ, ಎಂ.ವಿ. ರವೀಂದ್ರ, ರಾಜಗೋಪಾಲ್, ಸತ್ಯನಾರಾಯಣ್, ಈಶ್ವರ್, ಅಪ್ಸರ್ ಪಾಷ, ರಶೀದ್, ಗುಟ್ಟಸ್ವಾಮಿ, ನಾಗೇಂದ್ರ ರಾವ್ ಇದ್ದರು.