ಇಬ್ಬರು ಜೀತದಾರರಿಗೆ ವಿಮುಕ್ತಿ
ಟೇಕಲ್: ಮಾಸ್ತಿ ಗ್ರಾಮದ ಬಸ್‌ನಿಲ್ದಾಣದಲ್ಲಿ ಆಟೋ ಮತ್ತು ಟಾಟಾ ಸುಮೋ ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರಿಗೆ ಹಾಗೂ ನಾಗರಿಕರಿಗೆ ಬಾರಿ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಮಾಸ್ತಿ ಗ್ರಾಮದಲ್ಲಿ ಒಂದೇ ಬಸ್‌ನಿಲ್ದಾಣವಿದ್ದು, ನಿಲ್ದಾಣದಲ್ಲಿ ಖಾಸಗಿ, ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳು ಸುಮಾರು ದಿನಕ್ಕೆ 20-30 ಬಸ್ಸುಗಳು ಈ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು, ಬಸ್ ನಿಲ್ದಾಣವು ಚಿಕ್ಕದಾಗಿರುವುದರಿಂದ ಇಂತಹ ಬಸ್ ನಿಲ್ದಾಣದಲ್ಲಿ ಆಟೋ ಹಾಗೂ ಸುಮೋಗಳು ನಿಲ್ಲಿಸುತ್ತಿರುವುದರಿಂದ, ಬಸ್ಸುಗಳ ಸಂಚಾರಕ್ಕೆ ಸಾಕಾಗದೆ ಇರುವ ಸ್ಥಳದಲ್ಲಿ ಸುಮೋಗಳು ಹಾಗೂ ಆಟೋಗಳಿಂದ ಟ್ರಾಫಿಕ್ ಜಾಮ್ ಆಗಿ ಬಾರಿ ತೊಂದರೆ ಅನುಭವಿಸುವಂತಾಗಿದೆ. ಇದಲ್ಲದೆ ಸುಮೋಗಳು ಮತ್ತು ಆಟೋಗಳನ್ನು ನಿಲ್ದಾಣದಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ನಿಲ್ದಾಣದಲ್ಲಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು ಪ್ರಯಾಣಿಕರು ಹಾಗೂ ಮಹಿಳೆಯರಿಗೆ ತೊಂದರೆಯಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಮುಖ್ಯರಸ್ತೆಯಲ್ಲಿ ಅಂಗಡಿಗಳ ಮುಂದೆ ದ್ವಿಚಕ್ರವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಬಸ್ ಸಂಚಾರಕ್ಕೆ ಹಾಗೂ ಸಾರ್ವಜನಿಕರು ಓಡಾಟಕ್ಕೆ ತೊಂದರೆಯಾಗಿರುತ್ತದೆ. ಇಷ್ಟೆಲ್ಲ ತೊಂದರೆ ಇದ್ದರೂ ಗ್ರಾ.ಪಂ. ಅಧಿಕಾರಿಗಲು ಇದನ್ನು ಗಮನಿಸದೆ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಪಕ್ಕದಲ್ಲೆ ಇರುವ ಮಾಸ್ತಿ ಪೊಲೀಸರು ಇದಕ್ಕೆ ಕಡಿವಾಣ ಹಾಕದೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸುಮೋ, ಆಟೋಗಳಿಗೆ ಪ್ರತ್ಯೇಕ ಸ್ಥಳವನ್ನು ಒದಗಿಸಿ ಪ್ರಯಾಣಿಕರಿಗೆ ಹಾಗೂ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.