ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಧಾನಸಭೆಯಲ್ಲಿ ಧ್ವನಿ ಎತ್ತದ ಶಾಸಕರ ಮನೆ ಮುಂದೆ ಧರಣಿ

Vishwanath S
Updated On : 31 Aug 2013, 12:29 pm

ಬಂಗಾರಪೇಟೆ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತದ ಶಾಸಕರ ಮನೆಗಳ ಮುಂದೆ ರೈತರು ಧರಣಿ ಮಾಡುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಶಾಶ್ವತ ನೀವಾರಿ ಯೋಜನೆ ಜಾರಿಗಾಗಿ ರೈತರ ಬೃಹತ್ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನ ಶಾಶ್ವತ ನೀರಾವರಿ ಬಗ್ಗೆ ಮಾರುದ್ದ ಭಾಷಣ ಮಾಡುವರು. ನಂತರ ಆ ಬಗ್ಗೆ ಚಕಾರ ಎತ್ತುವುದೇ ಇಲ್ಲ ಇಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಜನರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು. ಈಗಾಗಲೇ ಬಂಗಾರಪೇಟೆ ಕ್ಷೇತ್ರದಲ್ಲಿ 1500 ಅಡಿಗಳಷ್ಟು ಆಳ ಕೊರೆದರೂ ನೀರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಗ್ರಾಮಗಳಿಂದ ಜನತೆ ಗುಳೆ ಹೋಗುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನೀರಾವರಿ ಸೌಲಭ್ಯಗಳಿಲ್ಲದೆ ಹೋದರೆ ಮುಂದೆ ಕೃಷಿ ಎಂಬುದೇ ದೇಶದಲ್ಲಿ ದುಬಾರಿಯಾಗಲಿ ರಾಜ್ಯ ಸರ್ಕಾರ 54  ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ ಹೊರತು ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಒಂಥರಾ ನಡೆದುಕೊಂಡರು.
 ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ರೈತರ ಪರವಾದ ಯೋಜನೆಗಳನ್ನು ಜಾರಿಗೆ ತಂದಿಲ್ಲ ರೈತರ ಸಂಪೂರ್ಣ ಸಮಸ್ಯೆಗಳು ಈಡೇರಬೇಕಾದರೆ ರಾಜ್ಯ ಬಜೆಟ್ ಮೊತ್ತದಲ್ಲಿ ಶೇ.25ರಷ್ಟು ಕೃಷಿಗೆ ಮೀಸಲಿಟ್ಟಾಗ ಮಾತ್ರ ಸಾಧ್ಯ ರೈತರಿಂದ ಬಲವಂತವಾಗಿ ಕೃಷಿ ಭೂಮಿಗಳನ್ನು ಕಸಿದುಕೊಂಡು ವಿದೇಶಿ ಬಂಡವಾಳದಾರರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಹಂಚುತ್ತಿರುವುದು ದುರ್ದೈವ ಸಂಗತಿ. ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸಿದರೆ ಮುಂದೆ ಜನರೇ ದೇಶದಿಂದಲೇ ಎತ್ತಂಗಡಿ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರೈತರು ಉತ್ಪದಿಸುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರನ್ನು ಆರ್ಥಿಕವಾಗಿ ಸದೃಢರಾಗಲು ಬೆಂಬಲಿಸಬೇಕು ಕೈಗಾರಿಕೋದ್ಯಮಿಗಳಿಗೆ ಇರುವ ನೀತಿ ನಿಯಮಗಳು ರೈತರಿಗೂ ಅನ್ವಯಿಸಬೇಕು ರೈತರ ಬಗ್ಗೆ ಬೂಟಾಟಿಕೆ ಮಾತುಗಳನ್ನು ಆಡುವ ಶಾಸಕರನ್ನು ಸಿಕ್ಕ ಕಡೆಯಲ್ಲಾ ಮುತ್ತಿಗೆ ಹಾಕಿ ಅವರ ಜನ್ಮಜಾಲಾಡಬೇಕು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಒಳಗಾಗಿ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರದಿದ್ದರೆ ಮತದಾರರು ಹಣದ ವ್ಯಾಮೋಹಕ್ಕೆ ಬಲಿಯಾಗದೆ ತಕ್ಕ ಪಾಠ ಕಲಿಸಿ ಎಂದು ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಸಿದ್ದವೀರಪ್ಪ ಕರೆ ನೀಡಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಟಿ.ಎನ್. ರಾಮೇಗೌಡ,ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿಲ್ಲಾಧ್ಯಕ್ಷ ಮಂಜುನಾಥ್, ಕಾಮಸಮುದ್ರ ಘಟಕದ ಅಧ್ಯಕ್ಷ ರಮೇಶ್, ಪಲ್ಲವಿಮಣಿ, ಆಂಜಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement