ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ

Rashmi Kasaragodu
Updated On : 2 Dec 2013, 12:23 pm

ಕೋಲಾರ: ನಗರದ ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಹಮತ್ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ಲಂಗ್ ಮಾಡಿ ಜನರಿಗೆ ವಂಚಿಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಭಾನುವಾರ ಎರಡು ಅಂಗಡಿಗಳ ಮೇಲೆ ದಾಳಿ ಮಾಡಿ 7 ಸಿಲಿಂಡರ್‌ಗಳನ್ನು ಮತ್ತು ಗ್ಯಾಸ್ ಫಿಲ್ಲಿಂಗ್ ಮಾಡುವ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಗಲ್ ಪೇಟೆ ಪಿಎಸ್‌ಐ ಲಿಯಾಖತ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಿದ್ದು ಆರೋಪಿಗಳಾದ ಅತ್ತಾವುಲ್ಲಾ ಮತ್ತು ಆಯ್ಯೂಬ್ ಎಂಬವರು ಪರಾರಿಯಾಗಿದ್ದಾರೆ.

ಆಯ್ಕೆ ಸಂತಸ ತಂದಿದೆ; ರಾಜೇಶ್ವರಿ
ಕೆಜಿಎಫ್: ಡಿ.5ರಂದು ನಗರದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆ ಆಗಿರುವುದು ಅತೀವ ಸಂತಸ ತಂದಿದೆ. ಆದರೆ ಪ್ರತಿಭಾವಂತರೆಲ್ಲರಿಗೆ ಇಂತಹ ಅವಕಾಶ ಸಿಗದಿರುವುದು ಬೇಸರವಾಗಿದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪಿ.ರಾಜೇಶ್ವರಿ ಹೇಳಿದರು.
ಕೆಜಿಎಫ್‌ನ ಸೆಂತ್‌ಜೋಸೆಫ್ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ,ಚಿನ್ನದ ಗಣಿ ಪ್ರದೇಶದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಹೆಚ್ಚಿನ ಜವಾಬ್ದಾರಿ ಹೊತ್ತು ಇತರೆ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಒಗ್ಗೂಡಿ, ಈ ಭಾಗದಲ್ಲಿ ಕನ್ನಡದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಣೆ
ಶ್ರೀನಿವಾಸಪುರ; ಕನ್ನಡ ನಾಡಿನ ಭವ್ಯ ಪರಂಪರೆಗಾಗಿ ಶ್ರಮಿಸಿದ ಎಲ್ಲ ಮಹನೀಯರ ಆದರ್ಶಗಳನ್ನು ಪಾಲಿಸುವಂತೆ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಕರೆ ನೀಡಿದರು.
  ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆಯಿಂದ ಆಚರಿಸುತ್ತಿದ್ದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಪಂ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ,  ಎಸ್. ಶ್ರೀನಿವಾಸಪ್ಪ, ಮೆಹಬೂಬ್ ಷರೀಫ್,  ಏಜಾಜ್ ಪಾಷ, ನಾಸೀರ್ ಇದ್ದರು.


ಪದಾಧಿಕಾರಿಗಳ ಆಯ್ಕೆ
ಮಾಲೂರು; ಕೆಪಿಸಿಸಿ ಮಾಲೂರು ಬ್ಲಾಕ್‌ನ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದ್ದು, ಅಧ್ಯಕ್ಷ-ಮುನಿರಾಜು, ಉಪಾಧ್ಯಕ್ಷ- ವೈ. ನಾರಾಯಣ್, ರಾಜಗೋಪಾಲ್‌ರೆಡ್ಡಿ, ಪಾರ್ವತಮ್ಮ, ಖಂಜಾಚಿ- ಎಂ.ಕೆ. ಆನಂದ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ-ನಾರಾಯಣಸ್ವಾಮಿ, ಎಂ. ವೆಂಕಟೇಶ್, ವಿಶ್ವನಾಥ್ ಗೌಡ, ಶೇಷಪ್ಪ, ಜಯಂತಿ, ಉಮಾ. ಇ.ಸಿ. ಸದಸ್ಯರು -ಶಮೀವುಲ್ಲಾ, ಈಶ್ವರ್, ಎಂ. ವೆಂಕಟೇಶ್, ಭೈರಪ್ಪ, ಸುಬ್ರಮಣಿ, ಎಂ.ವಿ. ನಾರಾಯಣಸ್ವಾಮಿ, ಜಿ. ಕೃಷ್ಣಪ್ಪ, ಶ್ರೀನಿವಾಸ್, ಮುನಿಸ್ವಾಮಿ ರೆಡ್ಡಿ, ಪಿ. ನಾಗರಾಜ್, ಗೋಪಾಲ್‌ಗೌಡ, ವಿ. ಮುನಿಯಪ್ಪ, ಶಾಂತಮ್ಮ, ಅಮರಾವತಿ, ಮುನಿಯಮ್ಮ, ಎಂ.ಆರ್. ಕವಿತಾ, ಸುಶ್ಮಾ ರವಿ ರೆಡ್ಡಿ, ಮಂಜುಳ ಮಲ್ಲೇಶ್ ಆಯ್ಕೆಯಾಗಿದ್ದಾರೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೀರಾಭಿಷೇಕ
ಚಿಕ್ಕಬಳ್ಳಾಪುರ: ನಗರದ ಶ್ರೀಮರಳು ಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕೊನೆ ಸೋಮವಾರ (ಡಿ.2 ರಂದು) 8 ನೇ ವರ್ಷದ ಕ್ಷೀರಾಭಿಷೇಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಶ್ರೀ ಮರಳು ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿಗೆ 1008 ಲೀಟರ್ ಹಾಲಿನ ಅಭಿಷೇಕ ಡಿ.2 ರಂದು ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದ್ದು ಹಾಲನ್ನು ಭಕ್ತರು ತಾವೇ ಶಿವಲಿಂಗಕ್ಕೆ ಅಭಿಷೇಕ ಮಾಡುವ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ವಿಶೇಷ ಲಕ್ಷ ದೀಪೋತ್ಸವ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಭಾ ಕಾರಂಜಿ
ಶಿಡ್ಲಘಟ್ಟ: ಮಕ್ಕಳ ಪ್ರತಿಭೆ ಹೊರ ಹೊಮ್ಮುವಂತೆ ಮಾಡಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಹೇಳಿದರು. ತಾಲೂಕಿನ ಭಕ್ತರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಮಕ್ಕಳು ಟಿವಿ ಮತ್ತು ಕಂಪ್ಯೂಟರ್ ಮುಂದೆ ಕುಳಿತು ನಮ್ಮ ಆಚಾರ ವಿಚಾರ, ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಸೂಕ್ತ ವೇದಿಕೆ
ಶಿಡ್ಲಘಟ್ಟ: ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಿ.ಎನ್. ಅಹಲ್ಯ ಹೇಳಿದರು.  ತಾಲೂಕಿನ ಮೇಲೂರು ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಭಾಗವಹಿಸಲು ಸಂಕೋಚ ಬಿಡಬೇಕು ಎಂದು ಕಿವಿ ಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement