ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಚರಣೆಗಳಿಂದ ಅಭಿವೃದ್ಧಿ ಅಸಾಧ್ಯ

Rashmi Kasaragodu
Updated On : 2 Dec 2013, 12:27 pm

ಮಾಲೂರು: ಆಡಂಬರದ ಆಚರಣೆಗಳಿಂದ ಕನ್ನಡ ಭಾಷೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ರಾಜು ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿಯ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಬ. ಶ್ರೀನಿವಾಸ್, ನವೀನ್ ಕುಮಾರ್, ಆಟೋ ಮಂಜು, ಚೆನ್ನಕೃಷ್ಣ, ಲವ-ಕುಶ, ರವಿ, ನಾರಾಯಣಸ್ವಾಮಿ, ರಾಮಾಂಜಿ, ಶ್ಯಾಮ್, ಅಮೀರ್,ನಾಗಯಾದವ್ ಇದ್ದರು.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
ಬಂಗಾರಪೇಟೆ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೂಡಲೆ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ಸಾವಿಗೆ ಸರ್ಕಾರವೇ ನೇರ ಕಾರಣವಾಗಿದೆ. ಮೃತರ ಕುಟುಂಬಕ್ಕೆ ರು. 25 ಲಕ್ಷ ಪರಿಹಾರ ನೀಡಬೇಕು ಮತ್ತು ವಿಧಾನಸೌಧದಲ್ಲಿ ಅವರ ಕುಟುಂಬದ ಸದಸ್ಯರಿಗೆ ನೌಕರಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಅಧ್ಯಕ್ಷ  ಟಿ.ಎನ್. ರಾಮೇಗೌಡ, ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿ. ನಾರಾಯಣಸ್ವಾಮಿ, ರಘುನಾಥ್, ಅಂಜಿ, ಚಲಪತಿ, ಶ್ರೀನಿವಾಸ್, ಗೋವಿಂದಪ್ಪ ಇದ್ದರು.
ಶುದ್ಧಿಕರಿಸಿದ ನೀರಿನ ಘಟಕಕ್ಕೆ ಚಾಲನೆ
ಬಂಗಾರಪೇಟೆ: ಬರಗಾಲದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಲಭ್ಯವಿರುವ ನೀರಿನಲ್ಲಿ ಪ್ಲೋರೈಡ್ ಅಂಶ ತುಂಬಿದೆ. ಇದನ್ನು ಕುಡಿವ ಜನರು ಹಲವು ರೋಗಗಳಿಗೆ ಒಳಗಾಗುತ್ತಿದ್ದು ರೋಗಗಳಿಂದ ಜನರನ್ನು ಪಾರು ಮಾಡಲು ಕ್ಷೇತ್ರದಲ್ಲೆಡೆ ಹಂತ ಹಂತವಾಗಿ ಶುದ್ಧಿಕರಿಸಿದ ನೀರಿನ ಘಟಕ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಶಾಸಕ ನಾರಾಯಣಸ್ವಾಮಿ ತಿಳಿಸಿದರು. ಕ್ಷೇತ್ರದ ದೊಡ್ಡೂರು, ಘಟ್ಟಕಾಮದೇನಹಳ್ಳಿ ಹಾಗೂ ಕೂಡಗಲ್ ಗ್ರಾಮದಲ್ಲಿ 29ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ಧೀಕರಿಸಿದ ಕುಡಿಯುವ ನೀರಿನ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಬರ ಸತತವಾಗಿ ತಾಂಡವಾಡುತ್ತಿದೆ. ಇದರಿಂದ ಶುದ್ಧ ಕುಡಿಯುವ ನೀರಿಗೂ ಬರ ಆವರಿಸಿ ಪ್ಲೊರೈಡ್ ತುಂಬಿರುವ ನೀರನ್ನು ಜನರು ಕುಡಿದು ನಾನಾ ಕಾಯಿಲೆಗಳಿಗೆ ಸಿಲುಕಿದ್ದಾರೆ ಎಂದರು. ಕೆ. ಚಂದ್ರಾರೆಡ್ಡಿ, ಪಿಚ್ಚಹಳ್ಳಿ ಗೋವಿಂದರಾಜು, ಹೊಸರಾಯಪ್ಪ, ದೊಡ್ಡೂರು ಗೋವಿಂದಪ್ಪ, ಮುನಿಯಪ್ಪ ಇದ್ದರು.
ತಂಬಾಕು ನಿಷೇಧ ಜಾಗೃತಿ ಜಾಥಾ
ಕೆಜಿಎಫ್:  ಯುವಕರು ಮತ್ತು ವಿದ್ಯಾರ್ಥಿಗಳು ತಂಬಾಕು ಸೇವನೆ ಮತ್ತು ಇತರೆ ದುಶ್ಚಟಗಳಿಗೆ ಮಾರುಹೋಗಿ ಜೀವನ ಹಾಳುಮಾಡಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ ಹೇಳಿದರು. ನಗರದ ಉರಿಗಾಂಪೇಟೆ ಕಮಲಾ ನೆಹರು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಂಬಾಕು ನಿಷೇಧ ಪ್ರತಿಜ್ಞೆ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧ್ಯ ವಯಸ್ಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ತಂಬಾಕು ಸೇವನೆಗೆ ಒಳಪಟ್ಟಿದ್ದಾರೆ. ಇಂತಹ ದುಶ್ಚಟಗಳಿಂದ ಅವರ ಬಾಳು ಹಾಳುಮಾಡಿಕೊಳ್ಳುವುದರ ಜೊತೆಗೆ ತಮ್ಮ ತಂದೆ ತಾಯಿಗಳು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಮೇಲೆ ಇಟ್ಟಿರುವ ನಂಬಿಕೆಯನ್ನು ಒಡೆದು ಹಾಕುತ್ತಿದ್ದಾರೆ ಎಂದರು. ರಾಬರ್ಟ್‌ಸನ್‌ಪೇಟೆ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ, ತಂಬಾಕು, ಸಿಗರೇಟ್, ಮದ್ಯ ಸೇರಿದಂತೆ ಇತರೆ ಮಾದಕದ್ರವ್ಯಗಳ ಸೇವೆನೆಗೆ ಒಳಗಾದವರಿಗೆ ಹೆಚ್ಚು ಅರಿವು ಮೂಡಿಸಲು ಸರ್ಕಾರಗಳು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಇದೇ ವೇಳೆ ನೂರಾರು ಶಾಲಾ ಮಕ್ಕಳು ಪ್ರತಿಜ್ಞೆಯನ್ನು ಮಾಡಿ ನಂತರ ಶಾಲೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಉದಯಕುಮಾರ್, ಕಿರಣ್, ಶ್ರೀನಿವಾಸರೆಡ್ಡಿ, ಗೋಪಿನಾಥ್ ಸೇರಿದಂತೆ ಇತರೆ ಶಿಕ್ಷಕರು ಮುಖ್ಯಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement