ಉಪನ್ಯಾಸಕರಿಗೆ ಬೀಳ್ಕೊಡುಗೆ
ಮಾಲೂರು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತರಾದ ಜೀವಶಾಸ್ತ್ರ ಪ್ರಾಧ್ಯಪಕ ಎಂ.ವಿ.ನಾಗರಾಜಯ್ಯ ಅವರಿಗೆ ಕಾಲೇಜು ಭೋದಕ ವರ್ಗಆತ್ಮೀಯ ಬೀಳ್ಕೂಡುಗೆ ಹಮ್ಮಿಕೊಂಡಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ, ಹಿರಿಯರಾದರೂ ಹೂಸ ಉಪಾನ್ಯಾಸಕ ಹಾಗೂ ವಿದ್ಯಾರ್ಥಿಗಳೂಂದಿಗೆ ಬೆರೆಯುವ ನಾಗರಾಜಯ್ಯ ಅವರ ಭೋಧನಾ ಶೈಲಿ ಇತರಿಗೂ ಮಾದರಿಯಾಗಿದೆ ಎಂದರು. ಬೀಳ್ಕೂಡಿಗೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಎಂ.ವಿ. ನಾಗರಾಜಯ್ಯ, ಸಹಪ್ರಾಧ್ಯಾಪಕರು, ವಿದ್ಯಾರ್ಥಿಗಳ ಪ್ರೀತಿಗೆ ಚಿರಋಣಿ ಎಂದರು. ಎಲ್ಲ ಉಪನ್ಯಾಸಕರು ಮಾತನಾಡಿದರು.