ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಏಡ್ಸ್ ಅರಿವು ಮೂಡಿಸಲು ಬೀದಿ ನಾಟಕ

Rashmi Kasaragodu
Updated On : 2 Dec 2013, 12:25 pm

ಮಾಲೂರು: ವಿಶ್ವ ಏಡ್ಸ್ ದಿನಚಾರಣೆ ಅಂಗವಾಗಿ ರೋಟರಿ ಕ್ಲಬ್, ಬುಜ್ ಇಂಡಿಯಾ ಟ್ರಸ್ಟ್ ಸಹಕಾರದಲ್ಲಿ ಪಟ್ಟಣದಲ್ಲಿ ಏಡ್ಸ್ ರೋಗದ ಅರಿವು ಮೂಡಿಸುವ ಬೀದಿ ನಾಟಕ ಹಮ್ಮಿಕೊಂಡಿತ್ತು. ಪಟ್ಟಣದಲ್ಲಿ ಎಚ್‌ಐವಿ ಮತ್ತು ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸುವ ಜಾಥ ನಡೆಸಿದ ಸೇವಾಶಕ್ತ ತಂಡ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಬುಜ್ ಇಂಡಿಯಾ ಟ್ರಸ್ಟ್‌ನ ಸಂಯೋಜಕ ಚಂದ್ರಶೇಖರ್, ಎಚ್‌ಐವಿ ಪೀಡಿತರನ್ನು ಕಳಂಕಿತರಂತೆ ಕಾಣದೆ ಪ್ರೀತಿ ವಿಶ್ವಾಸದಿಂದ ಕಾಣಬೇಕಾಗಿದೆ. ಏಡ್ಸ್ ದಿನಾಚರಣೆ ಅಂಗವಾಗಿ ಸ್ವಯಂ ಸಂಘಗಳ ಸಹಕಾರದಲ್ಲಿ ಜನರಲ್ಲಿ ಏಡ್ಸ್ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಪತ್ರಕರ್ತ ಪಿ.ಎನ್. ದಾಸ್ ಮಾತನಾಡಿದರು. ಅಮೇಲಿಯಾ, ಶಶಿಧರ್, ಜಯಕುಮಾರ್ ಇದ್ದರು.
ನಿಷ್ಠ ಬೆಂಬಲ ಬೆಲೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ; ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಜಾರಿಗೆ ಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ನೂರಾರು ರೈತರು ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿ ನಂತರ ರೈತರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದರು. ತಾಲೂಕು ಕಚೇರಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗಂಗುಲಪ್ಪ, ವೆಂಕಟರವಣಪ್ಪ, ನಾಗರಾಜ್, ನರಸಿಂಹಪ್ಪ, ವೆಂಕಟರವಣ ಇದ್ದರು.
ತೆರಿಗೆ ಸಪ್ತಾಹ ಕಾರ್ಯಕ್ರಮ
ಕೆಜಿಎಫ್; ನಗರಸಭೆ ವತಿಯಿಂದ ಹಮ್ಮಿಕೊಂಡಿರುವ ಒಂದು ತಿಂಗಳ ತೆರಿಗೆ ಸಪ್ತಾಹ ಕಾರ್ಯಕ್ರಮಕ್ಕೆ ನಗರದ ಗೀತಾ ವಾರ್ಡ್‌ನಲ್ಲಿ ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರಸಭೆ ಸಿಬ್ಬಂದಿ ಬಡಾವಣೆಯ ಮನೆ ಬಾಗಿಲಿಗೆ ತೆರಿಗೆ ಸಂಗ್ರಹ ಮಾಡಲು ಬರುತ್ತಿದ್ದು ಇದರ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಕಂದಾಯ ನಿರೀಕ್ಷಕ ಕಿರಣ, ಜಯರಾಮ್, ಆರೋಗ್ಯ ನಿರೀಕ್ಷಕ ಜಯಹರಿ, ಅಮರೇಶ್, ರಾಮಚಂದ್ರ, ಕುಮಾರ್, ಸೀನಪ್ಪ, ಪಾಲರಾಜ್ ಇದ್ದರು.


ಇನ್ನೂ ತಪ್ಪದ ಗಜಪಡೆ ಉಪಟಳ
ಬಂಗಾರಪೇಟೆ: ಕಳೆದ ಎಂಟು ಒಂಬತ್ತು ದಿನಗಳಿಂದ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರು. ಮೌಲ್ಯದ ಫಸಲು ಆನೆಗಳ ಬಾಯಿಗೆ ಆಹಾರವಾಗುತ್ತಿರುವುದಕ್ಕೆ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ತಮಟಮಾಕನಹಳ್ಳಿ ಅರಣ್ಯ ಪ್ರದೇಶದಿಂದ ರಾಜ್ಯದ ಕಾಡಿಗೆ ಲಗ್ಗೆ ಹಾಕಿರುವ ಆನೆಗಳ ಹಿಂಡು ಕಳೆದ ಐದು ದಿನಗಳಿಂದ ದೋಣಿಮಡಗು ಪಂಚಾಯ್ತಿಯ ಬತ್ತಲಹಳ್ಳಿ, ತಳೂರು, ಮಲ್ಲೇಶಪಾಳ್ಯ ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ನಾವು ಅದೇ ಪ್ರಯತ್ನದಲ್ಲಿದ್ದೇವೆ ನೀವು ಭಯಪಡಬೇಡಿ ಎಂದು ಹೇಳುತ್ತಿದ್ದರೂ ಈವರೆಗೂ ಅವನ್ನು ಓಡಿಸುವ ಕಾರ್ಯದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ ಎಂಬುದು ರೈತರ  ಆರೋಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement