ಖ್ಯಾತ ಲೇಖಕರ ಪುಸಕ್ತಗಳ ನಕಲು: ನಾಲ್ವರ ಬಂಧನ
ಕೋಲಾರ: ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಲೇಖಕರ ಕೃತಿಗಳನ್ನು ನಕಲು ಮಾಡಿ ದೇಶ-ವಿದೇಶಗಳಿಗೆ ಸರಬರಾಜು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿಯ ಪ್ರಸಿದ್ಧ ಪ್ರಕಾಶನಾಲಯವೊಂದರ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಜಿಲ್ಲಾ ಎಸ್ಪಿ ಡಾ.ರಾಮ್ ನಿವಾಸ್ ಸಪಟ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಳೆದ ರಾತ್ರಿ ಕೋಲಾರದ ಆಟೋ ನಗರದ ಶೆಡ್ ಮೇಲೆ ದಾಳಿ ಮಾಡಿದಾಗ ಲಕ್ಷಾಂತರ ರು. ಬೆಲೆಯ ಪುಸಕ್ತಗಳು ಪತ್ತೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಲೇಖಕರ ಪುಸ್ತಕಗಳ ನಕಲಿ ಪೈರಸಿ ದಂಧೆಯನ್ನು ನಡೆಸುತ್ತಿದ್ದ ಶೇಖರ್, ನಲೀನ್, ಸೋನು ಹಾಗೂ ಮುನಿರಾಜು ಎಂಬುವರನ್ನು ಸಿಪಿಐ ಶಿವಕುಮಾರ್ ಹಾಗೂ ತಂಡ ಬಂಧಿಸಿ ವಿಚಾರಣೆ ನಡೆಸಿದಾಗ ದೇಶಿಯ ಮತ್ತು ಆಸ್ಟ್ರೇಲಿಯಾ ಮೂಲದ ಪ್ರಖ್ಯಾತ ಲೇಖಕರು ಬರೆದು ಪ್ರಕಟಿಸಿರುವ ಕೃತಿಗಳನ್ನು ನಗರದಲ್ಲಿ ನಕಲಿ ಮಾಡಿ ಮುದ್ರಿಸಿರುವುದು ಬೆಳಕಿಗೆ ಬಂದಿದೆ. ಈ ದಂಧೆಯನ್ನು ನಡೆಸುತ್ತಿರುವ ಪ್ರಮುಖ ಆರೋಪಿ ಬೆಂಗಳೂರಿನ ರಫೀಕ್ ನಾಪತ್ತೆಯಾಗಿದ್ದಾನೆ.
ಆಸ್ಟ್ರೇಲಿಯಾ ಮೂಲದ ಖ್ಯಾತ ಲೇಖಕ ಗ್ರೇಗರ್ ಡೇವಿಡ್ ರಾಬರ್ಟ್ ಅವರ ಹೆಸರಾಂತ ಶಾಂತಾರಾಮ್ ಕೃತಿಯನ್ನು ನಗರದ ಶೆಡ್ವೊಂದರಲ್ಲಿ ಮುದ್ರಣ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅತ್ಯುತ್ತಮ ಮಾರಾಟ ಕಂಡ ಪುಸ್ತಕ ಎಂದು ಪ್ರಸಿದ್ಧ ಪಡೆದಿರುವ ಶಾಂತಾರಾಮ್ ಎಂಬ ಕಣತಿ ಕೋಲಾರದ ಶೆಡ್‌ನಲ್ಲಿನ ಇರುವ ಮುದ್ರಣಾಲಯದಲ್ಲಿ ಮುದ್ರಿಸುತ್ತಿರುವುದು ಪತ್ತೆಯಾಗಿದೆ. ವಿಶ್ವದಲ್ಲಿ ಖ್ಯಾತಿ ಎನಿಸಿರುವ ಡೈಲಿ ಮೇಲ್, ಸಂಡೇ ಟೆಲಿಗ್ರಾಫ್, ಗಾರ್ಡಿಯನ್, ಸಂಡೇ ಟೈಮ್ಸ್ ಮತ್ತು ಟೈಮ್ ಔಟ್ ಪತ್ರಿಕೆಗಳಿಂದ ಪ್ರಶಂಸೆಯನ್ನು ಹೊಂದಿರುವ ಶಾಂತಾರಾಮ್ ಪುಸ್ತಕವನ್ನು ಕೋಲಾರದ ಆಟೋ ನಗರದಲ್ಲಿನ ಶೆಡ್ನ್‌ಲ್ಲಿ ಹೆಸರೇ ಇಲ್ಲದ ಪ್ರಿಂಗೆ ಪ್ರೆಸ್‌ನಲ್ಲಿ ಮುದ್ರಿಸಿ ದೇಶ-ವಿದೇಶಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಜಿಲ್ಲಾ ಎಸ್ಪಿ ಡಾ.ರಾಮ್‌ನಿವಾಸ್ ಸಪೆಟ್ ತಿಳಿಸಿದ್ದಾರೆ.
2003 ರಲ್ಲಿ ಆಸ್ಟ್ರೇಲಿಯಾ ಮೂಲದ ಸ್ಟ್ರೈಬ್ ಮತ್ತು 2004ರಲ್ಲಿ ಅಮೇರಿಕ ಮೂಲದ ಪಾನ್ ಮೆಕ್ಮಿಲನ್ ಎಂಬುವ ಪ್ರಕಾಶಕರು ಮತ್ತು ಮುದ್ರಕರ ಹಕ್ಕಿನಲ್ಲಿರುವ ಈ ಕಣತಿಯನ್ನು ಕೋಲಾರದ ಸ್ಲಂ ಬಡಾವಣೆಯ ಆಟೋ ನಗರದಲ್ಲಿ ಮುದ್ರಣ ಮಾಡಲಾಗುತ್ತಿದೆ. ಹಾಗೆಯೇ ದೇಶದ ಖ್ಯಾತ ಲೇಖಕ ಚೇತನ್ ಭಾಗ್ವತ್ ಅವರ ವಾಟ್ ಬ್ಯಾಂಗ್ ಇಂಡಿಯಾ ವಾಂಟ್ ಅನ್ನೋ ಪ್ರಸಿದ್ಧ ಕೃತಿಯ ಗ್ರಂಥವನ್ನು ಸಹ ಕೃತಿ ಚೌರ್ಯ ಮಾಡಿ ಕೋಲಾರದಲ್ಲಿ ನಕಲಿ ಮಾಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಕೊಲ್ಕತ್ತಾ ಮೂಲದ ರೂಪ ಪಬ್ಲಿಕೇಷನ್ ಪ್ರಕಾಶಕರು ಮತ್ತು ಮುದ್ರಕರಾಗಿರುವ ಹಕ್ಕನ್ನು ಹೊಂದಿರುವ ಈ ಕೃತಿಯನ್ನೂ ಕೋಲಾರದ ಮುದ್ರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.