ಜೂಜಾಟ: 11 ಮಂದಿ ಬಂಧನ
ಕೋಲಾರ: ನಗರದ ಕನಕನಪಾಳ್ಯದ ಬಳಿ ಜೂಜಾಟವಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ 11 ಜನರನ್ನು ಬಂಧಿಸಿ ಆರೋಪಿಗಳಿಂದ 24,610 ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಲಾರ ಸಿಪಿಐ ಶಿವಕುಮಾರ್ ಅವರು ಬಾತ್ಮೀದಾರರು ನೀಡಿದ ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಜೂಜಾಟವಾಡುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.