ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಮಫಲಕ ಬದಲಾವಣೆ

Rashmi Kasaragodu
Updated On : 2 Dec 2013, 12:25 pm

ಟೇಕಲ್: ನಾಡಕಚೇರಿಗಳ ಮುಂಭಾಗದಲ್ಲಿರುವ ಫ್ಲೆಕ್ಸ್‌ಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಮೂಡಿಸುತ್ತಿದೆ ಎಂಬ ಸುದ್ದಿ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದು, ಇದರ ಫಲವಾಗಿ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿದ್ದು ಫ್ಲೆಕ್ಸ್‌ಗಳನ್ನು ಖಾಲಿ ಮಾಡಲಾಗಿದೆ. ಹಲವು ಕಡೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರಭಾಗ್ಯ ಯೋಜನೆಯ ನಾಮಫಲಕಗಳನ್ನು ಹಾಕಲಾಗಿದ್ದು, ಸುದ್ದಿಯ ಹಿನ್ನಲೆಯಲ್ಲಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಟೇಕಲ್, ಮಾಸ್ತಿ, ಕೆ.ಜಿ. ಹಳ್ಳಿ, ಬನಹಳ್ಳಿ, ದಿನ್ನಹಳ್ಳಿ ಮುಂತಾದ ಕಡೆ ರಾಜ್ಯ ಆಡಳಿತ ಪಕ್ಷದ ಬರಹಗಳನ್ನು ನಾಮಫಲಕಗಳಲ್ಲಿ ಹಾಕಲು ಯೋಜನೆ ರೂಪಿಸಿದೆ.


ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕೆಜಿಎಫ್: ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಮತ್ತು ಹಠಮಾರಿ ಧೋರಣೆ ಹಾಗೂ ಬಾಕಿ ಹಣ ಸಿಗದೆ ನೊಂದ ರೈತ ವಿಠಲಅರಭಾವಿ ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಕ್ಕೆ ಸರ್ಕಾರ ವ್ಯವಸ್ಥಿತವಾಗಿ  ರೈತನನ್ನು ಸಕ್ಕರೆ ಲಾಬಿಗೆ ಮಣಿದು ಕೊಲೆ ಮಾಡಿರುವುದು ನಾಚಿಕೆಗೇಡು. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಇಡೀ ರಾಜ್ಯದ ಅನ್ನದಾತರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ನೇತೃತ್ವದಲ್ಲಿ ಬೇತಮಂಗಲ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹರಿಕುಮಾರ್ ರಾಜ್ಯದ ಎಲ್ಲಾ ಪಕ್ಷಗಳು ರೈತರು ದೇಶದ ಬೆನ್ನೆಲುಬು ಎಂದು ಹೇಳಿಕೊಂಡು 65 ವರ್ಷಗಳಿಂದ ಸಂಪೂರ್ಣವಾಗಿ ರೈತನ ಬೆನ್ನುಮೂಳೆಯನ್ನು ಮುರಿದಿದ್ದಾರೆ. ರೈತಾಪಿ ಜನ ಪ್ರತಿನಿತ್ಯ ಬದುಕುವುದಕ್ಕಾಗಿ ಸರ್ಕಾರಗಳನ್ನು ಧರಣಿಗಳ ಮುಖಾಂತರವೇ ಎಚ್ಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇಡೀ ರಾಜ್ಯಾದ್ಯಂತ ವಿವಿಧ ರೀತಿ ಬೆಳೆಗಳನ್ನು ಬೆಳೆಯುವ ರೈತನ ಪರಿಸ್ಥಿತಿ ಹದೆಗೆಟ್ಟು ಬೆಲೆ ಇಲ್ಲದೆ ಹಾಕಿದ ಬಂಡವಾಳ ವಾಪಸು ಪಡೆಯಲು ಸಾಧ್ಯವಾಗದೆ ಸರಣಿ ಆತ್ಮಹತ್ಯೆಗಳು ನಡೆಯುತ್ತಿದೆ ರೈತನು ಬೆಳೆ ಬೆಳೆಯಲು ಬೀಜ ಮತ್ತು ಗೊಬ್ಬರವನ್ನು ಕೇಳಿದರೆ ರೈತನಿಗೆ ಗುಂಡಿಕ್ಕುವ ಸರ್ಕಾರಗಳು ಇಂದು ರೈತ ಏನಾದರೂ ಪಡೆದುಕೊಳ್ಳಬೇಕಾದರೆ ನಮಗೆ ರೈತನ ಸಾವು ಬೇಕು ಎಂಬ ನಿರ್ಧಾರಕ್ಕೆ ಇಂದಿನ ಸರ್ಕಾರಗಳು ಬರುತ್ತಿರುವುದು ನಾಚಿಕೇಡಿನ ಸಂಗತಿಯಾಗಿದೆ ಎಂದರು.
ಅದೇ ರೀತಿ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದಿರುವ ಸರ್ಕಾರಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಸೂಕ್ತ ನಿರ್ಧಾರಕ್ಕೆ ಬರುತ್ತಿಲ್ಲ ಆದರೆ ಇಂತಹ ಸರ್ಕಾರಗಳಿಗೆ ಬುದ್ಧಿ ಕಲಿಸಿ ಕಿತ್ತೊಗೆಯುವ ಕಾಲ ದೂರವಿಲ್ಲ. ಈಗಾಲಾದರೂ ರೈತನ ಸಾವಿನ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು ರೈತನ ಉಳಿವಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ವಿಠಲಅರಭಾವಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ ರೈತನ ಮಗನಿಗೆ ಸರ್ಕಾರ ಉದ್ಯೋಗವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸುವ ಮೂಲಕ ಇನ್ನಾದರೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅದ್ಯಕ್ಷ ನಾರಾಯಣಗೌಡ, ಕೆ. ಶ್ರೀನಿವಾಸ್, ಮಂಜುನಾಥ್, ದೊಡ್ಡಕಾರಿ ವಿಶ್ವನಾಥ್, ಸುಬ್ರಮಣಿ, ಪ್ರತಾಪ್, ಬಾಬು, ಗಣೇಶ್, ವೆಂಕಟರಾಮರೆಡ್ಡಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement