ಬೇತಮಂಗಲದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
ಶಿಡ್ಲಘಟ್ಟ: ತಾಲೂಕಿನ ಚೀಮಂಗಲ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸಿ.ಬಿ. ಹನುಮಂತಪ್ಪ, ಕನ್ನಡ ಸಾಹಿತ್ಯ ಸಂಪತ್ತು ದೊಡ್ಡದು. ಮಾತೃಭಾಷೆಯನ್ನು ಗೌರವಿಸಬೇಕು.
ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕನ್ನಡ ಸಾಹಿತಿಗಳ ಕೊಡುಗೆ ಅಪಾರ. ಕನ್ನಡ ಪ್ರೇಮವೆಂದರೆ ನಮ್ಮ ಸಂಸ್ಕೃತಿಯ ಒಲವು. ಅದು ತಾನಾಗಿ ಒಳಗಿಂದ ಎದ್ದು ಬರಬೇಕು. ಕನ್ನಡ ಸಾಹಿತಿಗಳ ಜೀವನ ಚರಿತ್ರೆಗಳನ್ನು ಓದಬೇಕೆಂದರು. ತಾಪಂ ಮಾಜಿ ಸದಸ್ಯ ಮುನಿರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಜ್ಯೋತಿ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗ್ರಾಪಂ ಸದಸ್ಯರಾದ ಬಿ. ಈಶ್ವರ್, ರಾಮಪ್ಪ, ಸಿ.ಎನ್. ಬಸಪ್ಪ, ಶಿಕ್ಷಕ ಸಿ.ಎಂ. ಮುನಿರಾಜು ಇದ್ದರು.