ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯುತ್ಸವ

Rashmi Kasaragodu
Updated On : 2 Dec 2013, 12:27 pm

ಮಾಲೂರು: ಋಷಿ ಮುನಿಗಳಿಂದ ಸಂಸ್ಕೃತಿ ಭರಿತವಾಗಿರುವ ಭಾರತ ಸಂಸ್ಕೃತಿಯನ್ನು ಬೆಳೆಸುವುದರ ಮೂಲಕ ಕಾಪಾಡಬೇಕಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಹ.ರಾ.ನಾಗರಾಜಚಾರ್ಯ ಹೇಳಿದರು.
ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ತಾಲೂಕು ಬ್ರಾಹ್ಮಣರ ಸಂಘ ಆಯೋಜಿಸಿದ್ದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯುತ್ಸವದಲ್ಲಿ ವಿಶೇಷ ಉಪಾನ್ಯಾಸ ನೀಡಿ, ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳವಂತವರು ನಮ್ಮ ದೇಶವನ್ನು ಸುಸಂಸ್ಕೃತ ಭರಿತವಾಗಿ ನಿರ್ಮಿಸಿದರು. ಮಹರ್ಷಿ ಯಾಜ್ಞವಲ್ಕ್ಯ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿ ವಿಪ್ರರು ಪಾಲಿಸಬೇಕು ಎಂದರು. ವೇ.ಬ್ರ.ಅಂಜನ್ ಕುಮಾರ್ ಮಾತನಾಡಿ, ಬ್ರಾಹ್ಮಣಿಕೆಗೆ ಅಪತ್ತು ಬಂದಿರುವ ಇಂತಹ ಸಂಧರ್ಭದಲ್ಲಿ ವಿಪ್ರ ಭಾಂಧವರು ಒಗಟ್ಟಾಗಬೇಕಾಗಿರುವುದು ಅವಶ್ಯವಾಗಿದೆ ಎಂದರು.
ಅದ್ಧೂರಿ ಆಚರಣೆ: ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ ಸುಪ್ರಭಾತ ಸೇವೆ, ಗಣಪತಿ ಸೇವೆ, ಶಾಂತಿ ಮಂತ್ರ ಪಠನೆ, ದೇವತನಾಂದಿ, ಕಲಶಸ್ಥಾಪನೆ, ಪಂಚಾಮೃತ ಪುರಸರ ಏಕವಾರ ರುದ್ರಾಭಿಷೇಕ ನಡೆಯಿತು. ಬ್ರಾಹ್ಮಣರ ಸಂಘದ ಅಧ್ಯಕ್ಷ ಗುಂಡಣ್ಣ, ಶೇಖರ್, ಅಶ್ವಥ್ ನಾರಾಯಣ್, ಶೇಖರ್, ಚಂದ್ರು, ಕಮಲೇಶ್, ನಾಗನಂದ, ಹೆ.ಲಿಂ. ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement